", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/389279_1737351827_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjunathBhatkal" }, "editor": { "@type": "Person", "name": "8197584848" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಭಟ್ಕಳ: ಶ್ರೀ ಕ್ಷೇತ್ರ ಮುರ್ಡೇಶ್ವರದ ಶ್ರೀ ಮ್ಹತೋಬಾರ ಮುರುಡೇಶ್ವರ ದೇವರ ಮಹಾ ರಥೋತ್ಸವ ಜ.೧೯ರಂದು ಸಂಜೆ ಅತ್ಯಂತ ವಿಜೃಂಬಣೆಯಿದ ಸಾವಿರಾರು ಭಕ...Read more" } ", "keywords": "Node,Uttara-Kannada,News", "url": "https://publicnext.com/node" }
ಭಟ್ಕಳ: ಶ್ರೀ ಕ್ಷೇತ್ರ ಮುರ್ಡೇಶ್ವರದ ಶ್ರೀ ಮ್ಹತೋಬಾರ ಮುರುಡೇಶ್ವರ ದೇವರ ಮಹಾ ರಥೋತ್ಸವ ಜ.೧೯ರಂದು ಸಂಜೆ ಅತ್ಯಂತ ವಿಜೃಂಬಣೆಯಿದ ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಂಪನ್ನಗೊಡಿತು. ಪ್ರತಿ ವರ್ಷದಂತೆ ಮಕರ ಸಂಕ್ರಮಣದದು ಆರಂಭವಾದ ರಥೋತ್ಸವದ ಧಾರ್ಮಿಕ ವಿಧಿವಿದಾನಗಳು ಸಂಕ್ರಮಣದದು ಧ್ವಜಾರೋಹಣದೊಂದಿಗೆ ಉತ್ಸವಾದಿಗಳು ಪ್ರಾರಂಭಗೊಡಿದ್ದವು. ಪ್ರಥಮ ದಿನ ಬೀಜವಾಹನ, ಮಯೂರ ಯಂತ್ರೋತ್ಸವ, ಗಜ ಯಂತ್ರೋತ್ಸವ, ವೃಷಭ ಯಂತ್ರೋತ್ಸವ, ಡೋಲಾ ಯಂತ್ರೋತ್ಸವ ನಡೆದು ಜ.೧೯ರಂದು ಬೆಳಿಗ್ಗೆ ಶ್ರೀ ದೇವರ ರಥಾರೋಹಣ ಕಾರ್ಯದೊಂದಿಗೆ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸಂಜೆ ಮಹಾರಥೋತ್ಸವ ಜರುಗಿತು. ಸಂಜೆ ಮೃಗಬೇಟೆ, ಮುಡಿಗಂಧ ಪ್ರಸಾದ ವಿರತಣೆ, ಜ.೨೧ರಂದು ಚೂರ್ಣೋತ್ಸವ, ಅವಭೃಥ ಸ್ನಾನ, ಧ್ವಜಾವರೋಹಣ, ಅಂಕುರಾರೋಪಣ, ಮಹಾಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ವಿಧಿವಿದಾನಗಳು ಸಂಪನ್ನಗೊಳ್ಳಲಿವೆ.
ಇಲ್ಲಿನ ಓಲಗ ಮಂಟಪದ ಹತ್ತಿರ ರಥದ ಎಳೆಯುವುದಕ್ಕೂ ಪೂರ್ವ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಂತೆಯೇ ದೇವಸ್ಥಾನದ ವತಿಯಿಂದ ಆಡಳಿತ ಧರ್ಮದರ್ಶಿ ಸತೀಶ ಆರ್. ಶೆಟ್ಟಿ, ಸಚಿವ ಮಂಕಾಳ ವೈದ್ಯ, ಪತ್ನಿ ಡಾ. ಪುಷ್ಪಲತಾ ವೈದ್ಯ, ಮಗಳು ಬೀನಾ ವೈದ್ಯ ಮುಂತಾದ ಪ್ರಮುಖರು ರಥ ಕಾಣಿಕೆಯನ್ನು ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಜಯರಾಮ ಅಡಿಗಳ್ ಹಾಗೂ ವೇ.ಮೂ. ಶಿವರಾಮ ಅಡಿಗಳ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಮುಖರಾದ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಈಶ್ವರ ಎನ್. ನಾಯ್ಕ, ಈಶ್ವರ ದೊಡ್ಮನೆ, ಗ್ರಾ.ಪಂ.ಅಧ್ಯಕ್ಷೆ ನಾಗರತ್ನಾ ಪಡಿಯಾರ್, ನಯನಾ ನಾಗೇಶ ನಾಯ್ಕ, ಸದಸ್ಯ ಕೃಷ್ಣ ಜೆ. ನಾಯ್ಕ ಗ್ರಾಮ ಪಂಚಾಯತ್ ಸದಸ್ಯರುಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು. ರಥೋತ್ಸವವು ಅತ್ಯಂತ ಶಾಂತ ರೀತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಡಿ.ವೈ.ಎಸ್.ಪಿ. ಮಹೇಶ ಅವರ ನೇತೃತ್ವದಲ್ಲಿ ಸಿ.ಪಿ.ಐ. ವಸಂತ ಆಚಾರಿ, ಸಬ್ ಇನ್ಸಪೆಕ್ಟರ್ ಹನುಮಂತ ಬೀರಾದಾರ ಸೇರಿದಂತೆ ವಿವಿಧ ಸ್ಥರದ ಅಧಿಕಾರಿಗಳು ಬಂದೋಬಸ್ತ ಕಾರ್ಯ ನಡೆಸಿದರು.
Kshetra Samachara
20/01/2025 11:13 am