", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/405356-1737348016-net.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ : ಅದೊಂದು ಗ್ರಾಮದಲ್ಲಿ ಇರುವವರೆಲ್ಲ ಬಹುತೇಕ ಕೂಲಿ ಕಾರ್ಮಿಕರು, ಸಾವಿರಾರು ಜನರಿರುವ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ...Read more" } ", "keywords": "Vijayanagara, Mobile Network Issues, Rural Connectivity, Karnataka Villages, Digital Divide, Telecommunication Problems, Village Development, Karnataka News, Rural India,Infrastructure,Government", "url": "https://publicnext.com/node" } ವಿಜಯನಗರ : ಆಧುನಿಕತೆ ಮುಂದುವರೆದ್ರೂ ಗ್ರಾಮಕ್ಕಿಲ್ಲ ಮೊಬೈಲ್ ನೆಟ್ವರ್ಕ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಆಧುನಿಕತೆ ಮುಂದುವರೆದ್ರೂ ಗ್ರಾಮಕ್ಕಿಲ್ಲ ಮೊಬೈಲ್ ನೆಟ್ವರ್ಕ್

ವಿಜಯನಗರ : ಅದೊಂದು ಗ್ರಾಮದಲ್ಲಿ ಇರುವವರೆಲ್ಲ ಬಹುತೇಕ ಕೂಲಿ ಕಾರ್ಮಿಕರು, ಸಾವಿರಾರು ಜನರಿರುವ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ‌, ನಾವು ನಾಡಿನಲ್ಲಿ ಇದ್ದೇವೋ ಇಲ್ಲ ಅಮೆಜಾನ್ ಕಾಡಿನಲ್ಲಿ ಜೀವನ ಮಾಡುತ್ತಿದ್ದೇವಾ ಎನ್ನುವ ಅನುಮಾನದಲ್ಲಿ ಅಲ್ಲಿನ ಜನರು ಜೀವನ ಮಾಡುತ್ತಿದ್ದಾರೆ. ಗಡಿ ಗ್ರಾಮಕ್ಕೆ ಏನಾಗಿದೆ ಅಂತಿರಾ ಈ ಸ್ಟೋರಿ ನೋಡಿ.

ಹೀಗೆ ನೆಟ್ ವರ್ಕ್ ಇಲ್ಲದೆ ಪರದಾಡ್ತಿರೋ ಜನ. ಮೊಬೈಲ್ ನೆಟ್ವರ್ಕ್‌ಗಾಗಿ ಮರ ಏರಿ ಕುಳಿತ ಗ್ರಾಮಸ್ಥರು. ಆನ್‌ಲೈನ್ ಕ್ಲಾಸ್‌ಗೆ ಗುಡ್ಡದ ತುದಿಯಲ್ಲಿ ಕೂತು ಪಾಠ ಕೇಳುತ್ತಿರುವ ಮಕ್ಕಳು, ಈ ದೃಶ್ಯಗಳು ಕಂಡುಬಂದಿದ್ದು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ವಳತಾಂಡ ಗ್ರಾಮದಲ್ಲಿ.. ಈ ಸಮಸ್ಯೆಗೆ ಗ್ರಾಮಕ್ಕೆ ಯಾವಾಗ ಮುಕ್ತಿ ಕೊಡ್ತಿರಿ ಅಂತ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅರ್ಜೆಂಟ್ ಆಗಿ ಆಸ್ಪತ್ರೆಗೆ ಕರೆದೊಯ್ಯಬೇಕು ಅಂದ್ರೆ ಎರಡು ಕಿಲೋ ಮೀಟರ್ ಗುಡ್ಡ ಏರಲೇ ಬೇಕು. ಅಷ್ಟೇ ಅಲ್ಲದೇ ಗಡಿ ಗ್ರಾಮ ಅಂತ ಶಾಸಕರು, ಸಚಿವರು ಕೂಡಾ ನಿರ್ಲಕ್ಷ್ಯ ವಹಿಸಿದ್ದಾರೆ‌. ಚುನಾವಣೆ ವೇಳೆ ಗ್ರಾಮಕ್ಕೆ ಇನ್ನು ಕೆಲವೇ ದಿನಗಳಲ್ಲಿ ಮೊಬೈಲ್ ನೆಟ್ ಹಾಕಿಸ್ತೇವೆ ಅಂತೇಳಿ ನೀಡಿ ಮತ ಹಾಕಿಸಿಕೊಂಡು ಹೋಗುತ್ತಾರೆ. ಆದರೆ ಗೆದ್ದ ಬಳಿಕ ಯಾರೋಬ್ಬರೂ ಇತ್ತ ತಲೆ ಹಾಕಿಯೋ ಮಲಗೋದಿಲ್ವಂತೆ.

ಆನ್ಲೈನ್ ಮೂಲಕ ಅರ್ಜಿ ಹಾಕಲು, ಉದ್ಯೋಗದ ಮಾಹಿತಿ ಸಿಗದೆ ಒದ್ದಾಡುತ್ತಿದ್ದಾರೆ. ಗ್ರಾಮದ ಅನೇಕ ಜನರು ಈ ನೆಟ್ ವರ್ಕ್ ಸಮಸ್ಯೆಯಿಂದ ಎಷ್ಟೋ ಕುಟುಂಬಗಳು ಗ್ರಾಮವನ್ನೇ ತೊರೆದಿದ್ದಾರೆ.

ಒಟ್ಟಾರೆಯಾಗಿ ಆಧುನಿಕತೆ ಇಷ್ಟೊಂದು ಮುಂದುವರೆದು ಅಂಗೈಯಲ್ಲೇ ಜಗತ್ತೋ ಅನ್ನೋ ಕಾಲ ಇದೆ. ಇಂತಹ ಸಮಯದಲ್ಲೂ ಗಡಿಗ್ರಾಮಕ್ಕೆ ಮೊಬೈಲ್ ನೆಟ್ವರ್ಕ್ ಇಲ್ಲದೇ ಇರೋದು ನಾಗರಿಕ ಸಮಾಜಕ್ಕೆ ಹಿಡಿದ ಕೈಗನ್ನಡಿ ಆಗೋದ್ರ ಜೊತೆಗೆ ಶೋಚನೀಯ ಸಂಗತಿಯಾಗಿದೆ.

Edited By : Vinayak Patil
PublicNext

PublicNext

20/01/2025 10:10 am

Cinque Terre

40.5 K

Cinque Terre

0

ಸಂಬಂಧಿತ ಸುದ್ದಿ