", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1737307674-gdg.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಬೀದರ್, ಮಂಗಳೂರುನಲ್ಲಿ ನಡೆದ ಬ್ಯಾಂಕ್ ದರೋಡೆ, ಮರ್ಡರ್ ಪ್ರಕರಣಗಳ ನಂತರ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲಾ ಪೊಲೀಸ...Read more" } ", "keywords": "Gadag, Bank Security, ATM Surveillance, CCTV Cameras, Police Safety Measures, SP Khadak Notice, Karnataka Crime, Banking Security Measures, Public Safety, Gadag Police.,Crime,Law-and-Order", "url": "https://publicnext.com/node" } ಗದಗ: ಬ್ಯಾಂಕ್, ಎಟಿಎಂ ಬಳಿ ಸಿಸಿ ಕ್ಯಾಮರಾ, ಭದ್ರತೆ ನೇಮಿಸಿಕೊಳ್ಳುವಂತೆ ಎಸ್ಪಿ ಖಡಕ್ ಸೂಚನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬ್ಯಾಂಕ್, ಎಟಿಎಂ ಬಳಿ ಸಿಸಿ ಕ್ಯಾಮರಾ, ಭದ್ರತೆ ನೇಮಿಸಿಕೊಳ್ಳುವಂತೆ ಎಸ್ಪಿ ಖಡಕ್ ಸೂಚನೆ

ಗದಗ: ಬೀದರ್, ಮಂಗಳೂರುನಲ್ಲಿ ನಡೆದ ಬ್ಯಾಂಕ್ ದರೋಡೆ, ಮರ್ಡರ್ ಪ್ರಕರಣಗಳ ನಂತರ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್, ಮ್ಯಾನೇಜರ್‌ಗಳ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ಕೆಲ ಬ್ಯಾಂಕ್‌ಗಳು ಸೂಕ್ತ ಭದ್ರತೆ ವ್ಯವಸ್ಥೆ ಹೊಂದದೇ ಇರುವವರಿಗೆ ಖಡಕ್ ಎಚ್ಚರಿಕೆ ನೀಡಿದರು. ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಸಿಸಿಕ್ಯಾಮೆರಾ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಚಲನವಲನ, ಕ್ಯಾಸ್ ಸಾಗಿಸುವ ವೇಳೆ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ.

ಹಣ, ಚಿನ್ನ ಇಡುವಾಗ, ಅಥವಾ ಡ್ರಾ ಮಾಡಿಕೊಂಡು ಹೋಗುವ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ಕೆಲವು ರೈತರು ಬೆಳೆಯ ಹಣವನ್ನ ನಗದು ರೂಪದಲ್ಲಿ ಪಡೆಯುವುದರಿಂದ ಭದ್ರತೆಯ ಸೂಚನೆ ನೀಡಬೇಕು. ಎಟಿಎಂಗಳಲ್ಲಿ ಸಿಸಿಟಿವಿ, ಅಲರಾಂ, 24*7 ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಬಗ್ಗೆ ಎಸ್ಪಿ ಸೂಚನೆ ನೀಡಿದರು.

ಈ ವೇಳೆ ಜಿಲ್ಲೆಯ ನೂರಾರು ಜನ ಬ್ಯಾಂಕ್ ಅಧಿಕಾರಿಗಳು, ಪ್ರಬಾರಿ‌ ಎಸ್.ಪಿ, ಸುಂಕದ್, ಗದಗ ನರಗುಂದ ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿದಂತೆ ಅನೇಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

Edited By : Manjunath H D
PublicNext

PublicNext

19/01/2025 10:58 pm

Cinque Terre

44.38 K

Cinque Terre

0

ಸಂಬಂಧಿತ ಸುದ್ದಿ