", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/38633520250129011927filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "9113093241" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ. ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪತ್ತೆಹಚ್ಚುವಲ್ಲಿ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ...Read more" } ", "keywords": "Node,Gadag,Crime", "url": "https://publicnext.com/node" }
ಗದಗ.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪತ್ತೆಹಚ್ಚುವಲ್ಲಿ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಡಿ.20 ರಂದು ಶಿಗ್ಲಿ ಗ್ರಾಮದ ಮಹಿಳೆಯೊಬ್ಬಳ ವೆನಿಟಿ ಬ್ಯಾಗ್ದಲ್ಲಿದ್ದ 90 ಸಾವಿರ ರೂಪಾಯಿ ಕಿಮ್ಮತ್ತಿನ 15 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೇಸ್ ಹಾಗೂ ಜ.23 ರಂದು ಮಹಿಳೆಯೊಬ್ಬಳ ಕೈಚೀಲದಲ್ಲಿದ್ದ 90 ಸಾವಿರ ರೂಪಾಯಿ ಕಿಮ್ಮತ್ತಿನ 15 ಗ್ರಾಂ ತೂಕದ ಒಂದು ಬಂಗಾರದ ಚೈನ್ ಕಳ್ಳತನವಾದ ಪ್ರಕರಣ ದಾಖಲಾಗಿತ್ತು ಈ ಎರಡೂ ಪ್ರಕರಣಗಳಲ್ಲಿ ಆರೋಪಿತರ ಪತ್ತೆ ಮಾಡಲು ಗದಗ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಡಿ.ಎಸ್.ಪಿ, ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ನಾಗರಾಜ ಗಡದ ಹಾಗೂ ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ ರಾಠೋಡ ಹಾಗೂ ಎ.ಎಸ್.ಐ ಎನ್.ಎ ಮೌಲ್ವಿ, ಸಿಬ್ಬಂದಿಗಳಾದ ಆರ್.ಎಸ್ ಯರಗಟ್ಟಿ, ಎಮ್.ಎ. ಶೇಖ, ಡಿ.ಎಸ್. ನದಾಫ, ಎಚ್.ಐ ಕಲ್ಲಣ್ಣವರ, ಪಾಂಡುರಂಗರಾವ್, ಎ.ಆರ್. ಕಮ್ಮಾರ, ಎಮ್.ಎಸ್ ಬಳ್ಳಾರಿ, ಸಿ.ಎಸ್ ಮಠಪತಿ, ಎ.ಆರ್.ಎಸ್.ಐ ಗುರು ಬೂದಿಹಾಳ, ಸಂಜೀವ ಕೊರಡೂರ, ಮಧುಚಂದ್ರ ಧಾರವಾಡ, ಸೋಮು ವಾಲ್ಮೀಕಿ, ನಂದಯ್ಯ ಮಠಪತಿ ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಪತ್ತೆ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿತ್ತು.
ಅವರಂತೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರಾದ ಸಮೀರ ಶೇಖ ತಂದೆ ಅಮರ ಶೇಖ ಹಾಗೂ ಅಧಿಕಾ ಕೋಂ ಅಶೋಕ ಕಾಳೆ ಅವರನ್ನು ವಶಕ್ಕೆ ಪಡೆದು 90 ಸಾವಿರ ರೂಪಾಯಿ ಕಿಮ್ಮತ್ತಿನ 15 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೇಸ್ ಹಾಗೂ 90 ಸಾವಿರ ರೂಪಾಯಿ ಕಿಮ್ಮತ್ತಿನ 15 ಗ್ರಾಂ ತೂಕದ ಒಂದು ಬಂಗಾರದ ಚೈನ್ ಸೇರಿ ಒಟ್ಟು 1 ಲಕ್ಷ 80 ಸಾವಿರ ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿತನಿಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದವರಿಗೆ ಎಸ್ಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
29/01/2025 01:19 pm