ಚಿಕ್ಕಮಗಳೂರು: ಕಾಫಿ ಎಸ್ಟೇಟ್‌ನಲ್ಲಿ ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಪಾಲು ಮಾಡುತ್ತಿದ್ದ ವೇಳೆ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತೋಗರಿಹಂಗಲ್ ಗ್ರಾಮದ ಕೂತನ್ಕುಲ್ ಎಸ್ಟೇಟಿನಲ್ಲಿ ನಡೆದಿದೆ.
ಮೂವರು ಆರೋಪಿಗಳು ನಿನ್ನೆ ತಡರಾತ್ರಿ ಶಿಕಾರಿ ಮಾಡಿದ್ದ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ದೇವಯ್ಯ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 40 ಕೆ.ಜಿ. ಕಡವೆಯ ಮಾಂಸ, ಚರ್ಮ, ಚೂರಿ ಸೇರಿದಂತೆ ಒಂದು ರೈಫಲ್ ಹಾಗೂ ಒಂದು ಸಿಂಗಲ್ ಬ್ಯಾರಲ್ ಗನ್ ಸೇರಿದಂತೆ 50 ಜೀವಂತ ಹಾಗೂ ಬಳಸಿದ ಗುಂಡುಗಳು ಹಾಗೂ ಮಾಂಸವನ್ನು ಸಾಗಿಸಲು ಸಿದ್ದಪಡಿಸಿದ್ದ ಬೊಲೆರೋ ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಕಡವೆಯನ್ನು ಶಿಕಾರಿ ಮಾಡಿದ್ದ ನಾಗರಾಜ್, ಹಾಗೂ ಸುಭಾಷ್ ಎಂಬ ಇಬ್ಬರು ಆರೋಪಿಗಳು ತಲೆಮರಿಸಿಕೊಂಡಿದ್ದು. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಮಾಹಿತಿ ನೀಡಿದ್ದಾರೆ.
PublicNext
19/01/2025 10:06 pm