ತುಮಕೂರು : ಮಾಧ್ಯಮದವರು ಮೂಢನಂಬಿಕೆ,ಕಂದಾಚಾರ, ಮೌಡ್ಯಗಳಿಗೆ ಒತ್ತು ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ಅವರು ತುಮಕೂರಿನ ಎಸ್ ಎಸ್ ಐ ಟಿ ಕಾಲೇಜು ಆವರಣದಲ್ಲಿ ಆಯೋಜಿತವಾಗಿದ್ದ 39 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಯಾದವರು ಚಾಮರಾಜನಗರ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಿ ಎಂ ಖುರ್ಚಿಗೆ ಆಪತ್ತು ಎಂದು ಮಾಧ್ಯಮಗಳು ವಿಶ್ಲೇಶಿಸುತ್ತವೆ ಆದರೆ ನಾನು ಮುಖ್ಯಮಂತ್ರಿಯಾದ ಮೇಲೆ ಹಲವು ಭಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ ನನ್ನ ಖುರ್ಚಿ ಅಲುಗಾಡಲಿಲ್ಲ ಬದಲಾಗಿ ಭದ್ರವಾಯಿತು,ನನ್ನ ಕಾರಿನ ಮೇಲೆ ಕಾಗೆ ಕೂತಿದಕ್ಕೆ ಜ್ಯೋತಿಷಿಗಳು ಬಗೆ ಬಗೆಯ ಕಥೆ ಕಟ್ಟಿದರು ಸಿಎಂ ಖುರ್ಚಿ ಪಟ್ಟ ಬಜೆಟ್ ಬಳಿಕ ಪಥನವಾಗುತ್ತದೆ ಎಂದು ನಾನಾ ಕಥೆ ಕಟ್ಟಿದರು ಈ ಘಟನೆಯಾದ ಬಳಿಕ ಸಾಲು ಸಾಲು ಬಜೆಟ್ ಮಂಡಿಸಿದ್ದೇನೆ ಎಂದು ಮೂಡನಂಬಿಕೆ ,ಕಂದಾಚಾರದ ವಿರುದ್ದ ಕಿಡಿಕಾರಿದರು.
ಈ ರೀತಿ ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ,ಪತ್ರಕರ್ತರಿಕೆ ವೈಚಾರಿಕತೆ ಇರಬೇಕು,ವೈಜ್ಞಾನಿಕತೆ ಇರಬೇಕು ವಸ್ತು ಸ್ಥಿತಿ ಅರಿವಿರಬೇಕು,ಅಧ್ಯಯನಶೀಲರಾಗಬೇಕು ಎಂದು ಕಿವಿಮಾತು ಹೇಳಿದರು.
PublicNext
18/01/2025 07:27 pm