ತುಮಕೂರು: ಹೊಟ್ಟೆಪಾಡಿಗಾಗಿ ಕೂಲಿ ಅರಸಿ ಬಂದು ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರ ಖಾತೆಗೆ ಕನ್ನ ಹಾಕಿರುವ ಸೈಬರ್ ಖದೀಮರು 10 ಲಕ್ಷ ದೋಖಾ ಮಾಡಿರುವ ಘಟನೆ ನಡೆದಿದೆ.
ಜಯನಗರದಲ್ಲಿ ವಾಸವಿರುವ ಯಾದಗಿರಿ ಜಿಲ್ಲೆಯ ಯುವಕರು ಸೈಬರ್ ಎಂಬಾತ ವಂಚಕರ ಬಲೆಗೆ ಬಿದ್ದ ವ್ಯಕ್ತಿ. ಮೊದಲ ಬಾರಿಗೆ 9,800 ಜಮಾ ಮಾಡಿದ್ದಾರೆ. ನಂತರ ಖಾತೆಗೆ 11 ಸಾವಿರ ವಾಪಸ್ ಬಂತು. ಇದನ್ನು ನಂಬಿ ಬೇರೆಯವರಿಂದ ಹಣ ಪಡೆದು 5.18 ಲಕ್ಷ ಹಣ ಜಮಾ ಮಾಡಿದೆ. ನನ್ನ ಜತೆಯಲ್ಲಿದ್ದ ಅಂಬರೀಶ್, ಶರಣಗೌಡ, ಆನಂದ, ಶಾಂತಪ್ಪ ಕೂಡ 10 ಲಕ್ಷ ಹಣ ವರ್ಗಾಯಿಸಿದ್ದಾರೆ. ಸೈಬರ್ ಖದೀಮರು ಮೋಸ ಮಾಡಿದ್ದಾರೆ ಎಂದು ಸುರಪುರದ ತಿಪ್ಪಣ್ಣ ನಗರದ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸಂಗಮೇಶ್ ಎಂಬವರು ಲಿಂಕ್ ಕಳುಹಿಸಿದ್ದರಿಂದ ಹೀಗೆ ಹಣ ಹಾಕಿ 10 ಲಕ್ಷ ಕಳೆದುಕೊಂಡಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
PublicNext
27/01/2025 03:28 pm