", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/52563-1737192596-Untitled-design-(40).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬುದ್ಧಿವಾದ ಹೇಳಿದ ತಂದೆಯನ್ನೇ ಹತ್ಯೆಗೈದಿದ್ದ ಆರೋಪಿ ಮಗನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ‌. ರಾಮಚಂದ್ರ ಎಂಬುವವರ ತ...Read more" } ", "keywords": "Son kills father, father-son conflict, crime news, Karnataka news, India news, murder, family tragedy, son murders father, Bengaluru news, Karnataka, India, news, update, crime story, son kills father, family conflict, murder case,Bangalore,Bangalore-Rural,Crime", "url": "https://publicnext.com/node" } ಬೈದು ಬುದ್ಧಿ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಮಗ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈದು ಬುದ್ಧಿ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಮಗ

ಬೆಂಗಳೂರು : ಬುದ್ಧಿವಾದ ಹೇಳಿದ ತಂದೆಯನ್ನೇ ಹತ್ಯೆಗೈದಿದ್ದ ಆರೋಪಿ ಮಗನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ‌. ರಾಮಚಂದ್ರ ಎಂಬುವವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆಗೈದಿದ್ದ ಅವರ ಮಗ ರಘು (29) ಎಂಬಾತನನ್ನ ಬಂಧಿಸಲಾಗಿದೆ. ಜನವರಿ 10ರಂದು ರಾಜಾಜಿನಗರ 4ನೇ ಬ್ಲಾಕ್‌ನ 7ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಘಟನೆ ನಡೆದಿತ್ತು.

ಮೃತ ರಾಮಚಂದ್ರ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡು ಮನೋರೋಗಿಯಾಗಿರುವ ಪತ್ನಿಯನ್ನ ನೋಡಿಕೊಳ್ಳುತ್ತಿದ್ದರು. ಮದ್ಯಪಾನದ ಚಟಕ್ಕೆ ದಾಸನಾಗಿದ್ದ ಆರೋಪಿ, ನಿತ್ಯವೂ ಕುಡಿದು ಬರುವುದಲ್ಲದೆ, ಕೆಲಸಕ್ಕೆ ಹೋಗದೆ ಮದ್ಯಪಾನಕ್ಕೆ ಹಣ ಕೊಡುವಂತೆ ಪೋಷಕರೊಂದಿಗೆ ಕಿರಿಕ್ ಮಾಡುತ್ತಿದ್ದ. ಜನವರಿ 10ರ ರಾತ್ರಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಮಗನಿಗೆ ತಂದೆ ರಾಮಚಂದ್ರ ಬೈದು ಬುದ್ಧಿವಾದ ಹೇಳಿದ್ದರು. ಈ ವೇಳೆ ತಂದೆಯ ಮೇಲೆ ಸಿಟ್ಟಿಗೆದ್ದ ಆರೋಪಿ, ಕಬ್ಬಿಣದ ಸಲಾಕೆಯಿಂದ ಅವರ ತಲೆಗೆ ಹೊಡೆದಿದ್ದಾನೆ. ಕುಸಿದು ಬಿದ್ದ ರಾಮಚಂದ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/01/2025 03:00 pm

Cinque Terre

3.48 K

Cinque Terre

0