ಮುಲ್ಕಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಾಲಯದಲ್ಲಿ ಧನು ಪೂಜೆಯ ಸಂಪನ್ನೋತ್ಸವ ಮತ್ತು ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ - ಶನಿಪೂಜೆ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಮಹಮ್ಮಾಯಿ ದೇವರ ಬಲಿ ಸೇವಾದಿಗಳು ವೇದಮೂರ್ತಿ ರಮಾನಾಥ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್,ಭುಜಂಗ ಶೆಟ್ಟಿ ಮುಂಬೈ, ಸುಧಾಕರ ಮೆಸ್ಕಾಂ, ಚೇತನಾ ಮೋಹನದಾಸ, ಭೋಜ ದೇವಾಡಿಗ ಕಿಲ್ಪಾಡಿ, ವಿಟ್ಟಪ್ಪ ಗೌಡ ಪೆರ್ಮುದೆ, ಭೋಜ ಸಾಲ್ಯಾನ್, ಶಾಂತಿ ಕೊಪ್ಪಳ, ತಿಲಕ ದೇವಾಡಿಗ, ಭರತ್ ಆಚಾರ್ಯ, ವಿದ್ಯಾ ಗುತ್ತಕಾಡು, ಶ್ರೀಮತಿ ಹೇಮಲತಾ ಟೀಚರ್ ಎಣ್ಣೆಗೇಣಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
Kshetra Samachara
18/01/2025 12:15 pm