ಉಡುಪಿ: ಇದೇ ಮೊದಲ ಬಾರಿಗೆ ಹಿರಿಯ ನಟಿ ಉಮಾಶ್ರೀ ಯಕ್ಷಗಾನವೊಂದರಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ.
ಹೊನ್ನಾವರದಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಉಮಾಶ್ರೀ ಅಭಿನಯಿಸಿದರು. ಅದರಲ್ಲಿ
ಮಂಥರೆಯಾಗಿ ಅಭಿನಯಿಸಿದ ನಟಿ, ಯಕ್ಷಪ್ರೇಮಿಗಳ ಗಮನ ಸೆಳೆದರು. ಉಡುಪಿ ಜಿಲ್ಲೆಯ ಪೆರ್ಡೂರು ಮೇಳದಿಂದ ಈ ಯಕ್ಷಗಾನ ಆಯೋಜನೆಗೊಂಡಿತ್ತು. ರಾಜಕಾರಣಿ ಕಂ ಖ್ಯಾತ ನಟಿಯಾಗಿರುವ ಉಮಾಶ್ರೀ, ಯಕ್ಷಗಾನ ರಂಗದಲ್ಲಿ ಸವಾಲಿನ ಪಾತ್ರ ಎಂದೇ ಪರಿಗಣಿಸಲಾಗುವ ಮಂಥರೆಯ ವೇಷ ಧರಿಸಿದ್ದು ಯಕ್ಷಪ್ರೇಮಿಗಳನ್ನು ಪುಳಕಗೊಳಿಸಿದೆ
Kshetra Samachara
18/01/2025 11:41 am