ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಮೋಹನ್ ಭಾಗವತ್ ದೇಶದ ಜನರಿಗೆ ಕ್ಷಮೆಯಾಚಿಸಬೇಕು - ಸಂಸದ ತುಕಾರಾಂ ಆಗ್ರಹ

ವಿಜಯನಗರ: ರಾಮ ಮಂದಿರ ಕಟ್ಟಿದ ಮೇಲೆ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅಂದಿರುವ ಮೋಹನ್ ಭಾಗವತ್ ಸಂವಿಧಾನ ಓದಿದ್ದಾರಾ ಅಂತಾ RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಹೊಸಪೇಟೆಯಲ್ಲಿ ಸಂಸದ ಈ ತುಕಾರಾಂ ಕಿಡಿಕಾರಿದ್ರು.

ಮೋಹನ್ ಭಾಗವತ್ ಈ ರೀತಿ ಹೇಳುವ ಮೂಲಕ ಇಡೀ‌ ದೇಶಕ್ಕೆ ಭಾಗವತ್ ಅವಮಾನ ಮಾಡಿದ್ದಾರೆ. ಭಾರತಕ್ಕೆ 1947 ರಲ್ಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದ್ರೆ, RSS ಕಚೇರಿಯಲ್ಲಿ ಏನಾದ್ರೂ ಈಗ ಸ್ವಾತಂತ್ರ್ಯ ಸಿಕ್ಕಿರಬಹುದು ಅಂತ ವ್ಯಂಗ್ಯವಾಡಿದ್ರು. ಅಷ್ಟೇ ಅಲ್ಲದೇ ಮೊದಲು‌ ಮೋಹನ್ ಭಾಗವತ್ ಅವ್ರು ದೇಶದ ಜನರಿಗೆ ಕ್ಷಮೆಯಾಚಿಸಬೇಕು. ರಾಮ ಮಂದಿರ ಕಟ್ಟುವುದಕ್ಕೆ ಭೂಮಿ ಪೂಜೆಗೆ ಚಾಲನೆ ಕೊಟ್ಟಿದ್ದೇ ನಮ್ಮ‌ ರಾಜೀವ ಗಾಂಧಿ‌ ಅವ್ರು. ರಾಮ ಮಂದಿರ ಸೇರಿ ನೂರಾರು ಅಣೆಕಟ್ಟುಗಳು, 20 ಅಂಶಗಳ ಕಾರ್ಯಕ್ರಮ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಅಂತ ಕಾಂಗ್ರೆಸ್ ಸಂಸದ ತುಕಾರಾಂ ಮೋಹನ್ ಭಾಗವತ್ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಕಾಂಗ್ರೆಸ್ ಭಾರತದ ವಿರುದ್ಧ ಹೋರಾಡಲಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ‌ ಬಿಜೆಪಿ ಪ್ರತಿಭಟನೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಪ್ರತಿಭಟನೆ ಮಾಡ್ಕೊಳ್ಳಲಿ, ಜನ ಅವರನ್ನ ಅದಕ್ಕೆ‌ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. 47ರ ಸ್ವಾತಂತ್ರ್ಯ ಹೇಗಿರುತ್ತೇ ಅಂತಾ ತೋರಿಸ್ತೀವಿ ಕಾಯ್ತಾ ಇರಿ ಎಂದು ಸಂಸದ ತುಕಾರಾಂ ಹೇಳಿದ್ರು.

ಬೀದರ್ ನಲ್ಲಿ ಹಾಡಹಗಲೇ ಶೂಟೌಟ್ ಮಾಡಿ ದರೋಡೆ ಪ್ರಕರಣ ವಿಚಾರಕ್ಕೂ ಮಾತನಾಡಿ, ಬೀದರ್ ಪ್ರಕರಣ ಆಗಿರಬಹದು. ಬಳ್ಳಾರಿ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಇರಬಹುದು.. ಈಗಾಗಲೇ ಪೊಲೀಸ್ರು ಆಕ್ಟಿವ್ ಆಗಿ ಕೆಲಸ ಮಾಡ್ತಿದ್ದಾರೆ. ಫೈರಿಂಗ್ ಮಾಡಿ ಅತ್ಯಾಚಾರಿ‌ ಆರೋಪಿಯನ್ನ ಬಂಧಿಸಿ ಕ್ರಮ ಕೈಗೊಳ್ಳಿ ಅಂತ ಗೃಹ ಸಚಿವ ಪರಮೇಶ್ವರ್ ಅವರು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅಂತ ಹೇಳಿದ್ರು.

Edited By : Shivu K
PublicNext

PublicNext

17/01/2025 09:36 pm

Cinque Terre

23.24 K

Cinque Terre

2

ಸಂಬಂಧಿತ ಸುದ್ದಿ