", "articleSection": "Infrastructure,Agriculture", "image": { "@type": "ImageObject", "url": "https://prod.cdn.publicnext.com/s3fs-public/378325-1737123127-12.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಶೇಂಗಾ ಖರೀದಿ ಕೇಂದ್ರ ಇನ್ನೂ ಓಪನ್ ಆಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಶೇಂಗಾ ಬೆಳೆಗಾರರಿಗೆ ಅನುಕೂಲವಾಗಲಿ ಅಂತಾ...Read more" } ", "keywords": "Gadag News, Shenga Purchase Center, Farmer Protests, Karnataka Agriculture, Turmeric Farmers, Gadag Farmers, Agricultural Market, Karnataka Government, Farmer Issues, Rural Development.,Gadag,Infrastructure,Agriculture", "url": "https://publicnext.com/node" }
ಗದಗ: ಶೇಂಗಾ ಖರೀದಿ ಕೇಂದ್ರ ಇನ್ನೂ ಓಪನ್ ಆಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಶೇಂಗಾ ಬೆಳೆಗಾರರಿಗೆ ಅನುಕೂಲವಾಗಲಿ ಅಂತಾ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಶೇಂಗಾ ಖರೀದಿ ಕೇಂದ್ರ ಆರಂಭ ಮಾಡಿದ್ದರು. ಕ್ವಿಂಟಾಲ್ ಗೆ 6,783 ರೂಪಾಯಿ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಆರಂಭ ಮಾಡಲಾಗಿತ್ತು. ಆದರೆ, ಆ್ಯಪ್ ಅಪ್ ಡೇಟ್ ನೆಪ ಹೇಳಿ ಮೂರು ತಿಂಗಳಾದರೂ ನೋಂದಣಿ ಪ್ರಕ್ರಿಯೆ ಆರಂಭ ಆಗಿಲ್ಲ. ಇದರಿಂದಾಗಿ ರೈತರು ಆಕ್ರೋಶಗೊಂಡಿದ್ದಾರೆ.
ಗದಗ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆದಿದ್ದಾರೆ ಹಾಗೂ ಶೇಂಗಾ ರಾಶಿ ಮಾಡಿಕೊಂಡು ಮಾರಾಟಕ್ಕೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಶೇಂಗಾ ಖರೀದಿ ಕೇಂದ್ರ ಆರಂಭವಾಗಿಲ್ಲವಾದ್ದರಿಂದ ರೈತರು ಸಹಜವಾಗಿಯೇ ಕೋಪಗೊಂಡಿದ್ದಾರೆ.
Kshetra Samachara
17/01/2025 07:42 pm