", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/229640-1737118734-mulki.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ ಕಿನ್ನಿಗೋಳಿ ಬೆಳ್ಮಣ್ ಹೆದ್ದಾರಿಯ ಮುಂಡ್ಕೂರು ಜಾರಿಗೆಕಟ್ಟೆ ಚರ್ಚ್ ಬಳಿ ಶುಕ್ರವಾರ ಬೆಳಗ್ಗೆ 3 ಗಂಟೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ...Read more" } ", "keywords": "Kinnigoli, Mundkur, car accident, church, road mishap, Karnataka news, Kinnigoli news, Dakshina Kannada news, Mangalore news, road safety, car crash, injury, Indian road accidents. ,Udupi,Mangalore,Accident", "url": "https://publicnext.com/node" }
ಮುಲ್ಕಿ ಕಿನ್ನಿಗೋಳಿ ಬೆಳ್ಮಣ್ ಹೆದ್ದಾರಿಯ ಮುಂಡ್ಕೂರು ಜಾರಿಗೆಕಟ್ಟೆ ಚರ್ಚ್ ಬಳಿ ಶುಕ್ರವಾರ ಬೆಳಗ್ಗೆ 3 ಗಂಟೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚಾಲಕ ಸಹಿತ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳನ್ನು ಮಂಜಂಡಿ ನಿವಾಸಿ ಸಲಾದ್, ಮಂಗಳೂರು ಬಲ್ಮಠ ನಿವಾಸಿ ಇಲಿಯಾಸ್, ಭದ್ರಾವತಿ ನಿವಾಸಿ ನದೀಮ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಮುಂಡ್ಕೂರು ಜಾರಿಗೆಕಟ್ಟೆ ಚರ್ಚ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಭಾರೀ ಶಬ್ದದೊಂದಿಗೆ ಪಲ್ಟಿಯಾಗಿದೆ.
ಈ ಸಂದರ್ಭ ಕಟೀಲು ಪಾದಯಾತ್ರೆ ನಡೆಸುತ್ತಿರುವ ಭಕ್ತರು ಕೂಡಲೇ ಸಮಾಜಸೇವಕ ಕೆದಿಂಜೆ ಸುಪ್ರಿತ್ ಶೆಟ್ಟಿಯವರಿಗೆ ತಿಳಿಸಿದ್ದು ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಪತ್ರಕರ್ತ ಶರತ್ ಶೆಟ್ಟಿ ಜೊತೆಗೆ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
17/01/2025 06:29 pm