", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/235762-1737117854-Untitled-design-(69).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಉಡುಪಿ: ಸ್ಯಾಂಡಲ್‌ವುಡ್ ತಾರೆಯರು ಯಕ್ಷಗಾನ ರಂಗದಲ್ಲಿ ತಮ್ಮ ಛಾಪು ಮೂಡಿಸುವ ಎರಡು ವಿಶೇಷ ಪ್ರಯತ್ನಗಳು ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಬಹಳ ಚರ್...Read more" } ", "keywords": "Udupi news, Sandalwood actors, Yakshagana, coastal Karnataka, Kannada film industry, Yakshagana enthusiasts, Karnataka culture, traditional art forms, Udupi district, Sandalwood stars, Yakshagana performances, Karnataka news. ,Udupi,Mangalore,Cultural-Activity", "url": "https://publicnext.com/node" } ಉಡುಪಿ: ಸ್ಯಾಂಡಲ್‌ವುಡ್ ನಟರ ಯಕ್ಷಗಾನ ಪ್ರೀತಿ- ಕರಾವಳಿಯಲ್ಲಿ ಸಂಚಲನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ಯಾಂಡಲ್‌ವುಡ್ ನಟರ ಯಕ್ಷಗಾನ ಪ್ರೀತಿ- ಕರಾವಳಿಯಲ್ಲಿ ಸಂಚಲನ

ಉಡುಪಿ: ಸ್ಯಾಂಡಲ್‌ವುಡ್ ತಾರೆಯರು ಯಕ್ಷಗಾನ ರಂಗದಲ್ಲಿ ತಮ್ಮ ಛಾಪು ಮೂಡಿಸುವ ಎರಡು ವಿಶೇಷ ಪ್ರಯತ್ನಗಳು ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಬಹಳ ಚರ್ಚೆಯಲ್ಲಿದೆ. ದೂರದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮ್ಮ ಅನಾರೋಗ್ಯದ ನಡುವೆಯೂ 'ವೀರ ಚಂದ್ರಹಾಸ' ಎಂಬ ಯಕ್ಷಗಾನ ಆಧಾರಿತ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇತ್ತೀಚಿಗಷ್ಟೇ ಚಿತ್ರದ ಪೋಸ್ಟರ್‌ನಲ್ಲಿ, ಯಕ್ಷಗಾನದ ಸುಂದರ ವೇಷ ಧರಿಸಿರುವ ಶಿವಣ್ಣನ ಭಾವಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಯಕ್ಷಗಾನ ವೇಷ ಭೂಷಣಗಳಲ್ಲೇ ಮೊದಲ ಬಾರಿಗೆ ಮೂಡಿ ಬರುತ್ತಿರುವ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಚಿತ್ರದಲ್ಲಿ, ಶಿವಣ್ಣ ನಟಿಸುತ್ತಿರುವುದು ಗಮನ ಸೆಳೆದಿದೆ. ನಾಡ ಚಕ್ರವರ್ತಿ ಶಿವಪುಟ್ಟ ಸ್ವಾಮಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಸಂಕ್ರಾಂತಿಯ ವೇಳೆ ಬಿಡುಗಡೆಯಾದ ಪೋಸ್ಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಸದ್ಯ ಕರಾವಳಿಯಾದ್ಯಂತ ಈ ಪೋಸ್ಟರ್ ಹೊಸ ಸಂಚಲನ ಮೂಡಿಸಿದೆ.

ಇದೇ ವೇಳೆ, ಪುಟ್ಮಲ್ಲಿ ಖ್ಯಾತಿಯ ಚಿತ್ರ ಹಾಗೂ ರಂಗಭೂಮಿ ನಟಿ ಉಮಾಶ್ರೀ ಅವರು, ಪೆರ್ಡೂರು ಮೇಳದ ಯಕ್ಷಗಾನದಲ್ಲಿ ಬಣ್ಣ ಹಚ್ಚಲಿದ್ದಾರೆ. ರಾಜಕಾರಣಿ ಕಂ ಖ್ಯಾತ ನಟಿಯಾಗಿರುವ ಉಮಾಶ್ರೀ, ಯಕ್ಷಗಾನ ರಂಗದಲ್ಲಿ ಸವಾಲಿನ ಪಾತ್ರ ಎಂದೇ ಪರಿಗಣಿಸಲಾಗುವ ಮಂಥರೆಯ ವೇಷ ಧರಿಸಲಿದ್ದಾರೆ. ಜನವರಿ 17ರಂದು ಹೊನ್ನಾವರದಲ್ಲಿ ಪೆರ್ಡೂರು ಮೇಳ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಉಮಾಶ್ರೀ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಳೆದ ಎರಡು ದಿನಗಳಿಂದ ಯಕ್ಷಗಾನ ವೇಷವನ್ನು ಧರಿಸಿ ತಾಲೀಮು ಕೂಡಾ ನಡೆಸಿದ್ದಾರೆ. ಈ ಮೊದಲು ಕೂಡ ಹಲವು ಮಂದಿ ಕನ್ನಡ ಚಿತ್ರರಂಗದ ತಾರೆಯರು ಯಕ್ಷಗಾನ ವೇಷ ಧರಿಸಿದ್ದು, ಇದೀಗ ಪ್ರಮುಖ ಇಬ್ಬರು ನಟರು ಯಕ್ಷರಂಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಸಂಚಲನ ಮೂಡಿಸಿದೆ.

Edited By : Nagaraj Tulugeri
PublicNext

PublicNext

17/01/2025 06:14 pm

Cinque Terre

18.82 K

Cinque Terre

0

ಸಂಬಂಧಿತ ಸುದ್ದಿ