ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಫ್ಯಾಕ್ಟರಿಗೆ ನುಗ್ಗಿ ಸಾಕು ನಾಯಿ ಎಳೆದೊಯ್ದ ಚಿರತೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಡ್ಯ : ಫ್ಯಾಕ್ಟರಿಯೊಂದಕ್ಕೆ ನುಗ್ಗಿದ ಚಿರತೆ ಫ್ಯಾಕ್ಟರಿ ಮುಂದೆ ಮಲಗಿದ್ದ ನಾಯಿಯನ್ನು ಕಚ್ಚಿ ಎಳೆದೊಯ್ದಿರುವ ಘಟನೆ ಮಂಡ್ಯ ತಾಲೂಕು ಬಿ. ಯರಹಳ್ಳಿ ಗ್ರಾಮದ ಬಳಿ ಜರುಗಿದೆ.

ಈ ಗ್ರಾಮದ ಶಂಕರಲಿಂಗು ಎಂಬುವರಿಗೆ ಸೇರಿದ ಎರೆಹುಳು ಗೊಬ್ಬರ ತಯಾರಿಕಾ ಫ್ಯಾಕ್ಟರಿಯಲ್ಲಿ ಸೋಮವಾರ ಮುಂಜಾನೆ 2.30 ರ ಸಮಯದಲ್ಲಿ ಈ ಘಟನೆ ಜರುಗಿದ್ದು, ಗುರುವಾರ ಬೆಳಿಗ್ಗೆ ಫ್ಯಾಕ್ಟರಿಯ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ ವೇಳೆ ಚಿರತೆಯ ಈ ದಾಳಿ ಕೃತ್ಯ ಬೆಳಕಿಗೆ ಬಂದಿದೆ.

ಸೋಮವಾರ ಮುಂಜಾನೆ 2.30 ರ ಸಮಯದಲ್ಲಿ ಫ್ಯಾಕ್ಟರಿ ಆವರಣಕ್ಕೆ ನುಗ್ಗಿರುವ ಚಿರತೆ ಆವರಣದಲ್ಲಿ ಮಲಗಿದ್ದ ಸಾಕು ನಾಯಿ ಮೇಲೆ ದಾಳಿ ಮಾಡಿ ನಾಯಿಯನ್ನು ಕಚ್ಚಿ ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಿಗ್ಗೆ ನಾಯಿ ಕಾಣದಿದ್ದಾಗ ಎಲ್ಲೋ ಹೋಗಿರಬೇಕು ಎಂದು‌ಕೊಂಡಿದ್ದ ಫ್ಯಾಕ್ಟರಿಯವರು ಗುರುವಾರ ಬೆಳಿಗ್ಗೆ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಚಿರತೆ ನಾಯಿಯನ್ನು ಎಳೆದೊಯ್ಯುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ.

ಇದರಿಂದ ಆತಂಕಕ್ಕೆ ಒಳಗಾಗಿರುವ ಫ್ಯಾಕ್ಟರಿ ಮಾಲೀಕರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿ ಚಿರತೆ ಸೆರೆಗೆ ಕ್ರಮ ವಹಿಸುವಂತೆ ಕೋರಿದ್ದಾರೆ.

Edited By : Shivu K
PublicNext

PublicNext

17/01/2025 04:04 pm

Cinque Terre

19.43 K

Cinque Terre

0