ವಿಜಯನಗರ: ಲೋಕಸಭಾ ಚುನಾವಣೆ ನಡೆದು ಎಂಟು ತಿಂಗಳುಗಳು ಗತಿಸಿದ ಬಳಿಕ ಬಳ್ಳಾರಿ - ವಿಜಯನಗರ ಕಾಂಗ್ರೆಸ್ ಸಂಸದ ತುಕಾರಾಂ ಹೊಸಪೇಟೆ ತಾಲೂಕಿನಲ್ಲಿರೋ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡೋದ್ರ ಮೂಲಕ ತಮ್ಮ ಕಚೇರಿಯನ್ನ ಉದ್ಘಾಟನೆ ಮಾಡಿದ್ದಾರೆ.
ಜನಸಾಮಾನ್ಯರು ಸಂಸದರನ್ನ ಭೇಟಿ ಆಗಬೇಕು ಅಂದ್ರೆ ಅವರ ಹುಟ್ಟೂರು ಬಳ್ಳಾರಿಯ ಜಿಲ್ಲೆಯ ಸಂಡೂರಿಗೆ ತೆರಳಬೇಕಿತ್ತು. ಜೊತೆಗೆ ಸಂಸದರು ಸಾಮಾನ್ಯ ಜನರ ಕೈಗೆ ಸಿಗೋದಿಲ್ಲ. ಸಂಸದರಿಂದ ವಿಜಯನಗರ ಜಿಲ್ಲೆಗೆ ಅನ್ಯಾಯ ಆಗ್ತಿದೆ ಅಂತ ಸಾಕಷ್ಟು ಜನ ಸಾರ್ವಜನಿಕ ವಲಯದಲ್ಲಿ ಮಾತಾಡಿಕೊಳ್ತಿದ್ರು. ಇದ್ರ ಮಧ್ಯೆ ಸಂಸದರು ತಮ್ಮ ಕಚೇರಿಯನ್ನ ತೆರದು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡೋದಕ್ಕೆ ಮುಂದಾಗಿದ್ದಾರೆ. ಸಂಸದರು ಈಗ ಕಚೇರಿ ತೆರೆದಿದ್ರಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತವೆ ಅನ್ನೋದನ್ನ ಕಾದುನೋಡಬೇಕು.
ಸಂಸದರ ಕಚೇರಿ ಉದ್ಘಾಟನೆ ವೇಳೆ ಸಂಸದ ತುಕಾರಾಂಗೆ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಸಿಇಓ ನೊಂಗ್ಜಾಯ್ ಮೊಹಮ್ಮದ್ ಅಕ್ರಂ ಷಾ ಸಾಥ್ ನೀಡಿದ್ರು.
PublicNext
17/01/2025 03:34 pm