ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಡಿಸಿಗೆ ಅವಮಾನ ವಿಚಾರ‌ - ಸಿದ್ದರಾಮಯ್ಯನವ್ರಿಗೆ ಇದು ಹೊಸದೇನಲ್ಲ - ಪ್ರತಾಪ್ ಕಿಡಿ

ಮೈಸೂರು : ವಿಜಯನಗರ ಜಿಲ್ಲಾಧಿಕಾರಿ ಅಪಮಾನ ಮಾಡಿದ ವಿಚಾರ‌ಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ. ಇದು ಸಿದ್ದರಾಮಯ್ಯಗೆ ಹೊಸದಲ್ಲ. ಈ ಹಿಂದೆಯೂ ಅದೇ ಆಗಿತ್ತು. ಮೈಸೂರಿನಲ್ಲಿ ಅನೇಕ ಅಧಿಕಾರಿಗಳಿಗೆ ಇದೇ ರೀತಿ ಅಪಮಾನ ಮಾಡಿದ್ರು. ದಕ್ಷ ದಲಿತ ಜಿಲ್ಲಾಧಿಕಾರಿ ಶಿಖಾ'ರಿಗೆ ಸಿದ್ದು ಆಪ್ತ ಮರಿಗೌಡ ಅವಮಾನ ಮಾಡಿದ್ರು.

ಅಲ್ಲದೆ, ಪ್ರಾದೇಶಿಕ ಆಯುಕ್ತರಾಗಿದ್ದ ಐ.ಎ.ಎಸ್ ಅಧಿಕಾರಿ ರಶ್ಮಿ ಚಪ್ಪಲಿ ಹೊಡೆದ ಪ್ರಕರಣ ನಡೆದಿತ್ತು. ಆಗ ಅವರ ಬೆಂಬಲಿಗರು ಮಾಡುತ್ತಿದ್ರು. ಈಗ ಸಿದ್ದರಾಮಯ್ಯ ನೇರವಾಗಿ ಆ ಕೆಲ್ಸ ಮಾಡ್ತಿದ್ದಾರೆ. ಡಿಸಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಇದು ಇಡೀ ಅಧಿಕಾರಿಗಳ ವರ್ಗಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ.

Edited By : Suman K
PublicNext

PublicNext

17/01/2025 03:13 pm

Cinque Terre

14.43 K

Cinque Terre

0