ಬೈಂದೂರು: ಉಡುಪಿ ಜಿಲ್ಲೆ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಚಕ್ರಪೀಠ ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಶ್ರೀ ಕ್ಷೇತ್ರ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜನವರಿ 14 ರ ಮಕರ ಸಂಕ್ರಮಣ ಉತ್ಸವ ಹಾಗೂ ವಾರ್ಷಿಕ ಗೆಂಡ ಸೇವೆ, ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರದ ಉತ್ಸವಕ್ಕಾಗಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಯಿಂದ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಬಂದು ದೇವರ ದರ್ಶನ ಪಡೆದು, ಹೂ ಹಣ್ಣು ಕಾಯಿ ನೆರವೇರಿಸಿ, ಹರಕೆ ಸಲ್ಲಿಸಿದರು.
ಜನವರಿ 14 ,15, 16 ಮೂರು ದಿನ ನಡೆಯುವ ಜಾತ್ರೆಗೆ ಆಗಮಿಸುವಂತಹ ಭಕ್ತಾದಿಗಳಿಗೆ ಕಳೆದ 13 ವರ್ಷಗಳಿಂದ ನಿರಂತರ ಅನ್ನದಾನ ಪ್ರಸಾದ ನೀಡುತ್ತಿರುವ ನಾಗಲಕ್ಷ್ಮಿ ಸತೀಶ್ ಕೊಠಾರಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ನನಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಎಲ್ಲವನ್ನೂ ಕರುಣಿಸಿದ್ದಾನೆ. ನನ್ನ ಕೈಯಲ್ಲಿ ಶಕ್ತಿ ಇರುವ ತನಕವೂ, ಅನ್ನದಾನದ ಸೇವೆ ನಿರಂತರವಾಗಿ ಮಾಡುತ್ತೇನೆ. ಹಾಗೂ ನನಗೆ 13 ವರ್ಷಗಳಿಂದ ಅನ್ನದಾನ ಪ್ರಸಾದ ನೀಡಲಿಕ್ಕೆ ಅನುವು ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿಗೆ, ಹಾಗೂ ಧರ್ಮದರ್ಶಿಗಳಿಗೆ, ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು
ವರದಿ: ದಾಮೋದರ ಮೊಗವೀರ ನಾಯಕವಾಡಿ, ಪಬ್ಲಿಕ್ ನೆಕ್ಸ್ಟ್ ಬೈಂದೂರು
Kshetra Samachara
17/01/2025 11:48 am