ಉಡುಪಿ: ವಾರ್ಷಿಕ ಪರೀಕ್ಷೆಗಳು ಹತ್ತಿರವಾಗುತ್ತಿವೆ. ವಿದ್ಯಾರ್ಥಿಗಳಿಗೆ ಟೆನ್ಶನ್ ಶುರುವಾಗಿದೆ. ಮ್ಯಾಥ್ಸ್ ಸಹವಾಸ ಬೇಡ ಎಂದು ಪಿಯುಸಿಯಲ್ಲಿ ಆರ್ಟ್ಸ್, ಕಾಮರ್ಸ್ ತಗೊಂಡವರಿಗೆ ಎಕನಾಮಿಕ್ಸ್ ಡಯಾಗ್ರಾಮ್ ಗಳು ಅರ್ಥ ಆಗೋದಕ್ಕೆ ಸ್ವಲ್ಪ ಕಷ್ಟ ಆಗುತ್ತದೆ.
ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು, ಪರೀಕ್ಷೆ ಹಿನ್ನೆಲೆಯಲ್ಲಿ ಒಂದು ವಿಭಿನ್ನ ಐಡಿಯಾ ಮಾಡಿದೆ. ಎಕನಾಮಿಕ್ಸ್ ಹಬ್ಬ ಎಂಬ ಕಾನ್ಸೆಪ್ಟ್ ನ ಅಡಿಯಲ್ಲಿ ರೇಖಾ ಚಿತ್ರಗಳನ್ನು ರಂಗೋಲಿ ಮಾದರಿಯಲ್ಲಿ ವಿದ್ಯಾರ್ಥಿಗಳು ರಚಿಸಿದ್ದಾರೆ.
ಕಾಲೇಜಿನ ಸಭಾಂಗಣ ತುಂಬಾ ಬಣ್ಣಬಣ್ಣದ ರಂಗೋಲಿಗಳು. ಆದರೆ, ಇವು ರಂಗೋಲಿಗಳಲ್ಲ ಡಯಾಗ್ರಾಂಗಳು! ಸಬ್ಜೆಕ್ಟ್ ನಲ್ಲಿ ಬರುವ 24 ರೇಖಾಚಿತ್ರಗಳನ್ನು ವಿವಿಧ ಬಣ್ಣಗಳ ರಂಗೋಲಿಯಲ್ಲಿ ರಚನೆ ಮಾಡಲಾಗಿದೆ. ಮುಂದಿನ ಫೈನಲ್ ಪರೀಕ್ಷೆಗೆ ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಸಹಕಾರಿಯಾಗುತ್ತದೆ. ಬಣ್ಣಗಳು ವಿದ್ಯಾರ್ಥಿಗಳ ಮೆದುಳಿನಲ್ಲಿ ಬಹಳ ಚೆನ್ನಾಗಿ ನೆನಪಿರುತ್ತದೆ. ಜೊತೆಗೆ ಚಿತ್ರಗಳ ಮೂಲಕ ಕಲಿತರೆ ಅದು ಸ್ಮರಣೆಯಲ್ಲಿ ಉಳಿಯುತ್ತದೆ ಎಂಬುದು ವಿದ್ಯಾರ್ಥಿನಿಯರ ಅಭಿಪ್ರಾಯ.
PublicNext
16/01/2025 05:06 pm