", "articleSection": "Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737015706-V3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ ಎನ್ ಡಿ ಪಿ ಎಸ್ ಕಾಯ್ದೆ ಹಾಗೂ ಮಾದಕ ವಸ್ತುಗಳ ಕೆಲವು ಪ್ರಕರಣಗಳಲ್...Read more" } ", "keywords": "Mangalore City Police Commissionerate, seized narcotics destruction, drug menace, Mangalore police, Commissionerate limits, confiscated drugs, narcotics seizure, police action against drugs.,Udupi,Mangalore,Crime,Law-and-Order,News,Public-News", "url": "https://publicnext.com/node" } ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ

ಮುಲ್ಕಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ ಎನ್ ಡಿ ಪಿ ಎಸ್ ಕಾಯ್ದೆ ಹಾಗೂ ಮಾದಕ ವಸ್ತುಗಳ ಕೆಲವು ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯಂತೆ ಕೋಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೈನೇ ಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ ಕಂಪನಿಯಲ್ಲಿ ನಾಶಪಡಿಸಲಾಯಿತು.

ಈ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ,ಸಾಗಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಅಪರಾಧ ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು 2024ನೇ ಸಾಲಿನಲ್ಲಿ ಒಟ್ಟು 88 ಪ್ರಕರಣಗಳನ್ನು ದಾಖಲಿಸಿ 158 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಆರೋಪಿಗಳಿಂದ 7,51,99,930 ರೂಪಾಯಿ ಬೆಲೆ ಬಾಳುವ ಸುಮಾರು 190 ಕೆಜಿ ಗಾಂಜಾ, 7.744 ಎಂಡಿಎಂಎ, ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, 2025 ನೇ ಸಾಲಿನಲ್ಲಿ ಇದುವರೆಗೆ 5 ಪ್ರಕರಣಗಳನ್ನು ದಾಖಲಿಸಿ 9 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 73,75,000 ರೂ ಬೆಲೆಬಾಳುವ ಗಾಂಜಾ ಎಂಡಿಎ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ .

ಮಾದಕ ವಸ್ತು ಸೇವನೆಯ ಕುರಿತು 2024 ನೇ ಸಾಲಿನಲ್ಲಿ 1244 ಜನರ ಮೇಲೆ 1026 ಪ್ರಕರಣಗಳನ್ನು ಮತ್ತು 2025 ನೇ ಸಾಲಿನಲ್ಲಿ 37 ಜನರ ಮೇಲೆ 25 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಅವರು ಮಾತನಾಡಿ ನ್ಯಾಯಾಲಯದ ಅನುಮತಿ ಪಡೆದು ಮಂಗಳೂರು ನಗರ ವ್ಯಾಪ್ತಿಯ 13 ಠಾಣೆಗಳ ಒಟ್ಟು 37 ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 6,80,86,558 ಮೌಲ್ಯದ 460 335 ಕೆ ಜಿ ಗ್ರಾಂ ಗಾಂಜಾ, 7 ಕೆಜಿ 640 ಗ್ರಾಂ ಎಂಡಿಎಂಎ ಮತ್ತು ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಗಿದೆ ಎಂದರು.

ಈ ಸಂದರ್ಭ ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ ಕ್ರೈಂ ಕೆ. ರವಿಶಂಕರ್, ಎಸಿಪಿ ಶ್ರೀಕಾಂತ್, ಸಿಸಿಆರ್‌ಬಿ ಗೀತಾ ಕುಲಕರ್ಣಿ ವಿವಿಧ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳಾದ ನಾಗರಾಜ್ ಮೊಹಮ್ಮದ್ ಸಲೀಂ, ಅಜ್ಮತ್ ಅಲಿ, ಮಹೇಶ್ ಪ್ರಸಾದ್, ಶಿವಕುಮಾರ್, ರಾಜೇಂದ್ರ ಬಿ, ಸಂದೇಶ್ ಪಿ ಜಿ, ಸಂದೀಪ್,ಕೋಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೈನೇ ಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಪ್ರಶಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು

ಅನುಪಮ್ ಅಗರ್ವಾಲ್, ಮಂಗಳೂರು ಪೊಲೀಸ್ ಕಮಿಷನರ್

Edited By : Suman K
PublicNext

PublicNext

16/01/2025 01:52 pm

Cinque Terre

19.2 K

Cinque Terre

0

ಸಂಬಂಧಿತ ಸುದ್ದಿ