", "articleSection": "Accident,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737017112-V4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಲ್ಪೆ: ಜ್ಯುವೆಲ್ಲರಿ ಸಿಬ್ಬಂದಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕನಿಡಿಯೂರು ಗ್ರಾಮದ ಗರಡಿಮಜಲು ದೇವಿಕಟ್ಟೆ ಎಂಬಲ್ಲಿ ಸಂ...Read more" } ", "keywords": ",Udupi,Accident,News,Public-News", "url": "https://publicnext.com/node" }
ಮಲ್ಪೆ: ಜ್ಯುವೆಲ್ಲರಿ ಸಿಬ್ಬಂದಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕನಿಡಿಯೂರು ಗ್ರಾಮದ ಗರಡಿಮಜಲು ದೇವಿಕಟ್ಟೆ ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಬಡಾನಿಡಿಯೂರು ಗ್ರಾಮದ ರಮೇಶ ಶೇರಿಗಾರ್ (37) ಎಂದು ಗುರುತಿಸಲಾಗಿದೆ. ಉಡುಪಿಯ ಆಭರಣ ಜ್ಯುವೆಲ್ಲರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಎರಡು ದಿನಗಳ ಹಿಂದೆ ರಾತ್ರಿ ಮನೆಯಲ್ಲಿ ನನಗೆ ಹೆದರಿಕೆ ಆಗುತ್ತದೆ, ಈಗ ಬರುತ್ತೇನೆಂದು ಹೇಳಿ ತನ್ನ ಮೊಬೈಲ್‌ನ್ನು ತಂಗಿಗೆ ನೀಡಿ ಮನೆಯಿಂದ ಹೋಗಿದ್ದರು. ಬಳಿಕ ರಮೇಶ್ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದಾಗಿ ಎರಡು ದಿನಗಳ ಬಳಿಕ ಗರಡಿಮಜಲು ದೇವಿಕಟ್ಟೆಯ ಹಿಂಬದಿಯ ತೋಟದಲ್ಲಿರುವ ಬಾವಿಯ ಒಳಗೆ ರಮೇಶ ಅವರ ಮೃತದೇಹವು ಪತ್ತೆಯಾಗಿದೆ. ಇವರು ಮಾನಸಿಕ ಖಿನ್ನತೆಯಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/01/2025 02:15 pm