ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಪ್ರಸಿದ್ಧ ಹೆಮ್ಮಾಡಿ ಸೇವಂತಿಗೆಗೆ ಹವಾಮಾನ ವೈಪರೀತ್ಯದ ಹೊಡೆತ, ಬೆಳೆಗಾರರು ಕಂಗಾಲು

ಬೈಂದೂರು: ಹಬ್ಬ ಹರಿದಿನಗಳು ಅಥವಾ ಮನೆಯಲ್ಲಿ ಏನೇ ವಿಶೇಷ ಇದ್ದರೂ ಅಲ್ಲಿ ಸೇವಂತಿಗೆ ಬೇಕೇ ಬೇಕು. ಆದರೆ ಈ ಬಾರಿ ಸೇವಂತಿಗೆ ಬೆಳೆಯುವ ಊರಿನಲ್ಲಿ ಇಳುವರಿಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಮಕರ ಸಂಕ್ರಾಂತಿಗಾಗಿ ಅರಳುತ್ತಿದ್ದ ಸೇವಂತಿಗೆ ಈ ಬಾರಿ ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು.

ಉಡುಪಿ ಜಿಲ್ಲೆಯ ಹೆಮ್ಮಾಡಿ , ಸೇವಂತಿಗೆ ಬೆಳೆಯ ಮೂಲಕವೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವಂತ ಪ್ರದೇಶ. ಗುಣಮಟ್ಟದ ಸೇವಂತಿಗೆ ಹೂವಿಗೆ ಈ ಪ್ರದೇಶಕ್ಕೆ ಬರುವ ವ್ಯಾಪಾರಸ್ಥರು ಇಲ್ಲಿ ಖರೀದಿಸಿ ವ್ಯಾಪಾರ ಮಾಡುವುದು ಮಾಮೂಲಿ. ಅದರಲ್ಲೂ ಕುಂದಾಪುರದ ಮಾರಣಕಟ್ಟೆಯಲ್ಲಿ ನಡೆಯುವ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಮಕರ ಸಂಕ್ರಾಂತಿ ಉತ್ಸವಕ್ಕೆ ಈ ಹೆಮ್ಮಾಡಿಯ ಸೇವಂತಿಗೆ ಅರ್ಪಣೆಯಾಗಬೇಕು ಎನ್ನುವ ಸಂಪ್ರದಾಯವಿದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಸೇವಂತಿಗೆ ಇಳುವರಿಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಈ ಬಾರಿ ಕರಾವಳಿ ಜಿಲ್ಲೆಯಲ್ಲಿ ಉಂಟಾಗಿರುವ ಬಾರಿ ಹವಾಮಾನ ಬದಲಾವಣೆ, ಸೇವಂತಿಗೆ ಬೆಳೆಯ ಮೇಲೆ ಸಾಕಷ್ಟು ಹೊಡೆತ ನೀಡಿದೆ. ಅದರಲ್ಲೂ ಚಳಿ ಇರಬೇಕಾದ ಸಮಯದಲ್ಲಿ ಬೆವರು ಸುರಿಯುವಷ್ಟು ಸೆಕೆ ಕಾಣಿಸಿಕೊಂಡಿರುವುದು ಸೇವಂತಿಗೆ ಬೆಳೆಗೆ ದೊಡ್ಡ ಹೊಡೆತ ನೀಡಿದೆ.

ಹೆಮ್ಮಾಡಿಯಲ್ಲಿ ಡಿಸೆಂಬರ್ ಜನವರಿ ತಿಂಗಳಿನ ಚಳಿ ಮತ್ತು ಮಂಜಿನ ವಾತಾವರಣಕ್ಕೆ ಅನುಗುಣವಾಗಿ ಇದು ಅರಳುವುದು ಇಲ್ಲಿನ ವಿಶೇಷ. ಈ ಬಾರಿ ಚಳಿ ಮತ್ತು ಮಂಜಿನ ವಾತಾವರಣ ಇಲ್ಲದೇ ಇರುವುದು ಸೇವಂತಿಗೆ ಬೆಳೆಗೆ ಹೊಡೆತ ನೀಡಿದೆ. ಮೊಗ್ಗು ಅರಳುವ ಸಮಯದಲ್ಲಿ ಇಬ್ಬನಿ ಇಲ್ಲದೇ ಇರುವುದರಿಂದ ಸರಿಯಾದ ಸಮಯಕ್ಕೆ ಹೂವು ಇಳುವರಿಗೆ ಬಾರದೆ ಕೃಷಿಕರಿಗೆ ದೊಡ್ಡ ಹೊಡೆತ ನೀಡಿದೆ. ಇನ್ನು ಕುಂದಾಪುರದ ಭಾಗದಲ್ಲಿ ಬೆಳೆಯುವ ಈ ವಿಶಿಷ್ಟ ಸೇವಂತಿಗೆ ಹತ್ತಿರದ ಮಾಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಹೂವು.ಆದರೆ ಹೆಮ್ಮಾಡಿ ಸುತ್ತಮುತ್ತಲಿನ ಹರೇಗೋಡು ಕೆಂಚನೂರು ಸಹಿತ ಹಲವು ಪ್ರದೇಶಗಳಲ್ಲಿ ಒಟ್ಟು 50 ರಿಂದ 60 ಎಕರೆ ಪ್ರದೇಶದಲ್ಲಿ ಸೇವಂತಿಗೆ ಇಳುವರಿಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು ಬೆಳೆಗಾರರು ನಿರಾಶರಾಗಿದ್ದಾರೆ.

Edited By : Suman K
Kshetra Samachara

Kshetra Samachara

16/01/2025 03:34 pm

Cinque Terre

1.43 K

Cinque Terre

0

ಸಂಬಂಧಿತ ಸುದ್ದಿ