ನ್ಯೂಯಾರ್ಕ್: ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿದ್ದಂತೆ ಅದಾನಿ ಗ್ರೂಪ್ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. 100 ಶತಕೋಟಿ ಡಾಲರ್ ಅದಾನಿ ಗ್ರೂಪ್ ಷೇರುಗಳ ಮಾರಾಟದ ಕುರಿತು ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ತನ್ನ ರಿಸರ್ಚ್ ಅನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆ ಅದಾನಿ ಷೇರುಗಳು ಇಂದು ಕೇಂದ್ರೀಕರಿಸಿವೆ.
ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ತನ್ನ ಸಂಶೋದನೆಯನ್ನ ಸ್ಥಗಿತಗೊಳಿಸಿದೆ ಎಂದು ಹಿಂಡನ್‌ಬರ್ಗ್ ಸಂಸ್ಥಾಪಕ ನಾಥನ್ ಆಂಡರ್ಸನ್ ತಿಳಿಸಿದ್ದಾರೆ.
ಈ ಹಿಂದೆ ನಾನು ನನ್ನ ಕುಟುಂಬ, ಸ್ನೇಹಿತರು ಮತ್ತು ನಮ್ಮ ತಂಡದೊಂದಿಗೆ ನಾನು ಹೇಳಿರುವಂತೆ, ನಾನು ಈ ಬಾರಿ ಹಿಂಡನ್‌ಬರ್ಗ್ ಸಂಶೋದನೆಯನ್ನ ನಿಲ್ಲಿಸುವ ನಿರ್ಧಾರವನ್ನ ನಾನು ಮಾಡಿದ್ದೇನೆ ಎಂದು ಆಂಡರ್ಸನ್ ಪತ್ರದ ಮೂಲಕ ತಿಳಿಸಿದ್ದಾರೆ. 2023ರಲ್ಲಿ ಭಾರತೀಯ ಸಂಘಟಿತ ಸಂಸ್ಥೆಗಳ ವಿರುದ್ಧ ಹಿಂಡನ್‌ಬರ್ಗ್ ವರದಿಯನ್ನ ಪ್ರಕಟಿಸಿತ್ತು. ಅದಾನಿ ಗ್ರೂಪ್ ಕಡಲಾಚೆಯ ತೆರಿಗೆಳನ್ನು ಅಸಮರ್ಪಕವಾಗಿ ಬಳಕೆ ಮಾಡುತ್ತಿದೆ ಎಂದು ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ಆರೋಪ ಮಾಡಿತ್ತು. ಇನ್ನು ಅದನ್ನ ಅದಾನಿ ಕಂಪನಿ ನಿರಾಕರಿಸಿತ್ತು.
ಅದಾನಿ ಗ್ರೂಪ್ ತನ್ನ ಕಂಪನಿಯ ಷೇರುಗಳ ಬೆಲೆಯನ್ನ ಕೃತಕವಾಗಿ ಹೆಚ್ಚಿಸಲು ಬಳಸಿದ ಮಾರಿಷಸ್ ನಿಧಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಪಾಲನ್ನ ಹೊಂದಿದ್ದಾರೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿತ್ತು. ಇದು ಷೇರುಪೇಟೆಯಲ್ಲಿ ಸಾಕಷ್ಟು ಸಂಚಲನವನ್ನ ಉಂಟು ಮಾಡಿತ್ತು. ಇದರಿಂದಾಗಿ ಅದಾನಿ ಗ್ರೂಪ್ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿತ್ತು.
ಅಲ್ಲದೆ ನವೆಂಬರ್‌ನಲ್ಲಿ ಕೂಡ ನ್ಯೂಯಾರ್ಕ್‌ನಲ್ಲಿ ಬಹುಕೋಟಿ ಡಾಲರ್ ಲಂಚ ಮತ್ತು ವಂಚನೆ ಯೋಜನೆಯಲ್ಲಿ ಅವರ ಪಾತ್ರ ಇದೆ ಎಂದು ಆರೋಪಿಸಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ ಎಂದು US ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದರು. ಅದಾನಿ ತನಿಖೆಗೆ ಸಂಬಂಧಿಸಿದಂತೆ ದಾಖಲೆಗಳನ್ನ ರಕ್ಷಿಸುವಂತೆ ರಿಬ್ಲಿಕನ್ ಕಾಂಗ್ರೆಸ್ಸಿಗರೊಬ್ಬರು ನ್ಯಾಯಾಂಗ ಇಲಾಖೆಗೆ ವಿನಂತಿಸಿದ ನಂತರ ಹಿಂಡನ್‌ಬರ್ಗ್ ತನ್ನ ಸಂಶೋದನೆಯನ್ನ ಕೈಬಿಡುವ ನಿರ್ಧಾರ ಮಾಡಿದೆ.
ಹಿಂಡನ್ ಬರ್ಗ್ ಅನ್ನು 2017ರಲ್ಲಿ ಆರಂಭಿಸಿದ್ದ ಆಂಡರ್ಸನ್ ಅವರು ಈ ಯೋಜನೆಯನ್ನ ಅಂತ್ಯಗೊಳಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಾವು ಈಗಾಗಲೇ ಆರಂಭ ಮಾಡಿರುವ ಈ ಯೋಜನೆಯನ್ನ ಪೂರ್ಣಗೊಳಿಸಿದ ನಂತರವೇ ನಾವು ಈ ಯೋಜನೆಯನ್ನ ಕೈಬಿಡುವ ನಿರ್ಧಾರ ಮಾಡಿದ್ದೇವೆ. ಹಾಗೆ ಕೆಲವೊಮ್ಮೆ ಕೆಲವೊಂದು ತೀವ್ರವಾದ ವಿಚಾರಗಳು ಎಲ್ಲರನ್ನ ಹಾಗೆ ಎಲ್ಲವನ್ನ ಒಳಗೊಂಡಿರುತ್ತವೆ, ಇನ್ನು ಈ ನಿರ್ಧಾರಕ್ಕೆ ತಮ್ಮ ಸ್ವಭಾವವೇ ಕಾರಣ ಎಂದು ಅವರು ಬುಧವಾರ ವೆಬ್‌ಸೈಟ್‌ವೊಂದರಲ್ಲಿ ಪ್ರಕಟಿಸಿದ ಪೋಸ್ಟ್‌ನ ಮೂಲಕ ತಿಳಿಸಿದ್ದಾರೆ.
PublicNext
16/01/2025 03:42 pm