", "articleSection": "Business,Religion", "image": { "@type": "ImageObject", "url": "https://prod.cdn.publicnext.com/s3fs-public/387839-1737079725-Untitled-design---2025-01-17T073824.534.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳದ ಸಂಭ್ರಮ ಮನೆ ಮಾಡಿದ್ದು, ಕೋಟ್ಯಂತರ ಭಕ್ತರು ಮಹಾಕುಂಭನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್...Read more" } ", "keywords": "Maha Kumbh Mela Effect, Bengaluru-Prayagraj Flight, Airfare Hike, 89% Increase, Flight Price Surge, Kumbh Mela Travel Rush.,,Business,Religion", "url": "https://publicnext.com/node" }
ನವದೆಹಲಿ : ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳದ ಸಂಭ್ರಮ ಮನೆ ಮಾಡಿದ್ದು, ಕೋಟ್ಯಂತರ ಭಕ್ತರು ಮಹಾಕುಂಭನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ಪ್ರಮುಖ ನಗರಗಳಿಂದ ಪ್ರಯಾಗ್‌ರಾಜ್‌ಗೆ ಸಂಚರಿಸುವ ವಿಮಾನಗಳ ದರದಲ್ಲಿ ಹಲವು ಪಟ್ಟು ಏರಿಕೆಯಾಗಿದೆ.
ಅಂಕಿ ಅಂಶದ ಪ್ರಕಾರ, ಬೆಂಗಳೂರು ಮತ್ತು ಪ್ರಯಾಗ್‌ರಾಜ್ ನಡುವಿನ ದರದಲ್ಲಿ ಶೇ.89ರಷ್ಟು ಹೆಚ್ಚಳವಾಗಿದ್ದು, 11,158 ರೂ ಆಗಿದೆ. ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನದ ದರದಲ್ಲಿ ಶೇ.21ರಷ್ಟು ಏರಿಕೆಯಾಗಿ 5,748 ರೂಗೆ ತಲುಪಿದೆ.
ಮುಂಬೈ ಪ್ರಯಾಗ್‌ರಾಜ್ ನಡುವಿನ ವಿಮಾನ ದರ ಶೇ.13ರಷ್ಟು ಏರಿಕೆಯಾಗಿದ್ದು, 6,381 ರೂಗೆ ತಲುಪಿದೆ. ಈ ಹಿಂದೆ ಭೋಪಾಲ್ ಮತ್ತು ಪ್ರಯಾಗ್‌ರಾಜ್ 2,977 ರೂ ಇತ್ತು. ಸದ್ಯದ ದರ 17,796 ರೂ ಇದೆ.
ಇನ್ನು ಅಹಮದಾಬಾದ್- ಪ್ರಯಾಗ್‌ರಾಜ್ ನಡುವಿನ ದರ ಶೇ.41ರಷ್ಟು ಏರಿಕೆಯೊಂದಿಗೆ 10,364 ರೂಗೆ ತಲುಪಿದೆ. ಮಾತ್ರವಲ್ಲದೇ ಮಹಾಕುಂಭ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ಸಮೀಪದಲ್ಲಿರುವ ಲಖನೌ, ವಾರಾಣಾಸಿಗೆ ವಿಮಾನ ಪ್ರಯಾಣ ಶೇ.3ರಿಂದ 21ರಷ್ಟು ಏರಿಕೆಯಾಗಿದೆ. ರೈಲುಗಳ ಬುಕ್ಕಿಂಗ್‌ನಲ್ಲಿಯೂ ಹೆಚ್ಚಳವಾಗಿದೆ.
PublicNext
17/01/2025 07:40 am