ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜನವರಿ 16ರಿಂದ ಆಟಿಸಂ ಸೊಸೈಟಿಯಿಂದ ಛಾಯಾ ಶಿಕ್ಷಕರ ತರಬೇತಿ ಕಾರ್ಯಾಗಾರ

ಉಡುಪಿ: ಆಟಿಸಂ ಸೊಸೈಟಿ ಹಾಗೂ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಐಎಂಎ ಉಡುಪಿ ಕರಾವಳಿ ಆಶ್ರಯದಲ್ಲಿ ಜಿಲ್ಲೆಯಲ್ಲಿ ಸ್ವಲೀನತೆ ಹೊಂದಿರುವ ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಬೆಂಬಲ ನೀಡುವ ಉದ್ದೇಶದಿಂದ ಜನವರಿ 16 ರಿಂದ 18 ರವರೆಗೆ ಉಡುಪಿಯ ಐ.ಎಂ.ಎ. ಭವನದಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 4 ರವರೆಗೆ "ಸಾಥಿ" ಛಾಯಾ ಶಿಕ್ಷಕರ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷೆ ಅಮಿತಾ ಪೈ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೀಡಿಯಾಟ್ರಿಕ್​ ಫಿಸಿಯೋಥೆರಪಿಸ್ಟ್​, ಆಟಿಸಂ ಇಂಟರ್​ವೆನ್ನನಿಸ್ಟ್​, ಬಿಹೇವಿಯರ್​ ಥೆರಪಿಸ್ಟ್​ ಮುಂಬೈನ "ಸಾಹಸ್​" ಪೀಡಿಯಾಟ್ರಿಕ್​ ಇಂಟರ್​ವೆನ್​ ಸೆಂಟರ್​ ನಿರ್ದೇಶಕಿ ಡಾ. ನೀತಾ ಮಹ್ರಾ ತರಬೇತಿ ನೀಡಲಿದ್ದಾರೆ. ಕಾರ್ಯಾಗಾರವು ವಿವಿಧ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದ ಛಾಯಾ ಶಿಕ್ಷಕರಲ್ಲಿ ಕೌಶಲ್ಯವನ್ನು ವೃದ್ಧಿಸುವ ಕಾರ್ಯ ಮಾಡಲಿದೆ. ಸಮನ್ವಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಛಾಯಾ ಶಿಕ್ಷಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಛಾಯ ಶಿಕ್ಷಕರು ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬೆಳೆಯಲು ಸಹಕಾರ ನೀಡಲಿದ್ದಾರೆ ಎಂದರು.

ಬಾಳಿಗಾ ಆಸ್ಪತ್ರೆಯ ಡಾ. ನಾಗರಾಜ ಮೂರ್ತಿ, ಕಾರ್ಯಕ್ರಮ ಸಂಯೋಜಕ ಕೀರ್ತೇಶ್​ ಶೆಟ್ಟಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/01/2025 08:01 pm

Cinque Terre

2.35 K

Cinque Terre

0

ಸಂಬಂಧಿತ ಸುದ್ದಿ