ಮುಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ದನ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವವು ಮಕರ ಸಂಕ್ರಮಣದಂದು ನಡೆಯಿತು.
ಬೆಳಿಗ್ಗೆ ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮಗಳಿಂದ ಶ್ರೀ ದೇವರ ಸಾನಿಧ್ಯ ವೃದ್ದಿಯಾಗುವುದರ ಜೊತೆಗೆ ಲೋಕದಲ್ಲಿ ಶಾಂತಿ ನೆಮ್ಮದಿ ಸಾಧ್ಯ ಎಂದರು.
ರಾಜೀವಿ ಮತ್ತು ಸೇಸ ಶೆಟ್ಟಿ ರವರು ದೀಪ ಪ್ರಜ್ವಲನೆ ಮೂಲಕ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ರಾತ್ರಿ ಮಹಾಮಂಗಳಾರತಿ ಯೊಂದಿಗೆ ಸಮಾಪನಗೊಂಡಿತು. ಈ ಸಂದರ್ಭದಲ್ಲಿ ಶಿಮಂತೂರು ಯುವಕ ಮಂಡಲ, ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರು,ಸದಸ್ಯರು ಮತ್ತು ಊರ ಪರವೂರ ಭಕ್ತರು ಉಪಸ್ಥಿತರಿದ್ದರು.
Kshetra Samachara
15/01/2025 09:43 am