ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಸಿರಿಧಾನ್ಯ ಮೇಳದಲ್ಲಿ ತುಮಕೂರು ಡಿಸಿ, ಸಿಇಒಗೆ ಸೀರೆ ಕೊಡಿಸಿದ ಗೃಹಸಚಿವರು…!

ತುಮಕೂರು: ತುಮಕೂರಿನಲ್ಲಿ ಆಯೋಜಿತವಾಗಿರುವ ಸಿರಿಧಾನ್ಯ ಮೇಳದಲ್ಲಿ ಸಚಿವ ಡಾ. ಪರಮೇಶ್ವರ್ ತಮ್ಮ ಸ್ವಂತ ಹಣದಲ್ಲಿ ತಮ್ಮ ಪತ್ನಿ ಕನ್ನಿಕಾ ಪರಮೇಶ್ವರ್ , ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಪಾಲಿಕೆ ಆಯುಕ್ತೆ ಅಶ್ವಿಜ ಅವರಿಗೆ ಇಳಕಲ್ ಸೀರೆ ಕೊಡಿಸಿದರು.

ಸಿರಿಧಾನ್ಯ ಮೇಳ ಉದ್ಘಾಟನೆ ಬಳಿಕ ಅಧಿಕಾರಿಗಳ ಜೊತೆ ಮೇಳದಲ್ಲಿ ಒಂದು ಸುತ್ತು ಹಾಕಿ ಟವೆಲ್, ಗಿರ್ ತಳಿಯ ತುಪ್ಪ ಸೇರಿದಂತೆ ಹಲವು ಸಾಮಗ್ರಿಗಳನ್ನು ಖರೀದಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೇಳದಲ್ಲಿ ಚೌಕಾಸಿ ಮಾಡಿ ಹಲವು ಸಾಮಗ್ರಿ ಖರೀದಿ ಮಾಡಿದ್ದು ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿತು.

Edited By : Suman K
PublicNext

PublicNext

15/01/2025 11:27 am

Cinque Terre

29.8 K

Cinque Terre

0