", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/39710820250115105025filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "GN Bhat Yallpur" }, "editor": { "@type": "Person", "name": "7899588538" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಲ್ಲಾಪುರ: ಅತೀ ವೇಗವಾಗಿ ಚಲಾಯಿಸಿಕೊಂಡುಬಂದ ಬಸ್ ಮತ್ತು ಕಾರು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ನಾಲ್ಕು ಜನರಿಗೆ ಗಾಯವಾದ ಘಟನೆ ಯಲ್ಲ...Read more" } ", "keywords": "Node,Uttara-Kannada,News,Accident", "url": "https://publicnext.com/node" }
ಯಲ್ಲಾಪುರ: ಅತೀ ವೇಗವಾಗಿ ಚಲಾಯಿಸಿಕೊಂಡುಬಂದ ಬಸ್ ಮತ್ತು ಕಾರು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ನಾಲ್ಕು ಜನರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿಯ ಜಯಂತಿನಗರ ಕ್ರಾಸ್ ಸಮೀಪ ನಡೆದಿದೆ.
ಆರೋಪಿ ಬಸ್ ಚಾಲಕ ತೆಲಂಗಾಣ ರಾಜ್ಯದ ನರೇಶ ತಂದೆ ಶ್ರೀರಾಮುಲು ತನ್ನ ಬಸ್ ಅನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ವೇಗವಾಗಿ ಚಲಾಯಿಸಿಕೊಂಡುಬರುತ್ತಿರುವ ಸಂದರ್ಭದಲ್ಲಿ, ಆರೋಪಿ ಕಾರು ಚಾಲಕ ಧಾರವಾಡದ ಬಸವರಾಜ ತಂದೆ ಮಲ್ಲೇಶಪ್ಪ ಧಾರವಾಡ ಎಂಬಾತ ಹುಬ್ಬಳ್ಳಿ ಕಡೆಗೆ ತನ್ನ ವೆಗನಾರ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡುಬಂದ ಪರಿಣಾಮ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಈ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿವಾನಂದ ಚನ್ನಪ್ಪ ಅಂಗಡಿ, ಶಿವರಾಜ ತಂದೆ ಪ್ರವೀಣ ಹಡಪದ್, ಪ್ರಭು ಶೇಖಪ್ಪ ಹುಚ್ಚಯ್ಯನವರ್ ಹಾಗೂ ಉಮೇಶ ತಂದೆ ಸಂಗಪ್ಪ ಹಡಪದ್ ಎಂಬುವವರಿಗೆ ಗಾಯವಾಗಿದೆ. ಅಪಘಾತದಲ್ಲಿ ಕಾರು ಹಾಗೂ ಬಸ್ ಜಕಂಗೊಂಡಿದ್ದು, ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/01/2025 10:50 am