", "articleSection": "Health & Fitness,Education", "image": { "@type": "ImageObject", "url": "https://prod.cdn.publicnext.com/s3fs-public/222042-1736750474-WhatsApp-Image-2025-01-13-at-9.39.59-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿರಸಿ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ, ಉ.ಕ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್...Read more" } ", "keywords": "Sirsi taluk, government school, cooking staff, training program, Karnataka education, school development, teacher training, mid-day meal scheme. ,Uttara-Kannada,Health-and-Fitness,Education", "url": "https://publicnext.com/node" } ಶಿರಸಿ ತಾಲೂಕಿನ ಸರಕಾರಿ ಶಾಲಾ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಗಾರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ ತಾಲೂಕಿನ ಸರಕಾರಿ ಶಾಲಾ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಗಾರ

ಶಿರಸಿ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ, ಉ.ಕ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್, ಉಪನಿರ್ದೇಶಕರ ಕಚೇರಿ, ಶಿರಸಿ ಶೈಕ್ಷಣಿಕ ಜಿಲ್ಲೆ ಶಿಕ್ಷಣಾಧಿಕಾರಿಗಳು, ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ಅಡುಗೆ ಸಿಬ್ಬಂದಿಗಾಗಿ ಏರ್ಪಡಿಸಿದ ಅಡುಗೆ ತಯಾರಿಕಾ ಸ್ಪರ್ಧೆ 2024-25 ತಾಲೂಕಿನ ಎಲ್ಲಾ ಅಡುಗೆ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಜನವರಿ 12 ಭಾನುವಾರ ದಂದು ಹಮ್ಮಿಕೊಳ್ಳಲಾಗಿತ್ತು.

ತರಬೇತಿಯನ್ನು ಶಿರಸಿ ಉಪನಿರ್ದೇಶಕರಾದ ಪಿ ಬಸವರಾಜ ಉದ್ಘಾಟಿಸಿ ಅಡುಗೆ ಸಿಬ್ಬಂದಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಇಲಾಖೆ ನಿರ್ದೇಶನ ಕುರಿತು ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸತೀಶ್ ಹೆಗಡೆ ಪೌಷ್ಟಿಕ ವನ ನಿರ್ಮಾಣ ಹಾಗೂ ತರಕಾರಿ ಬಳಕೆ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಅಡುಗೆ ತಯಾರಿಕಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ 60 ವರ್ಷ ಮೇಲ್ಪಟ್ಟ ನಿವೃತ್ತ ಅಡುಗೆ ಸಿಬ್ಬಂದಿಯವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಿರಸಿ ಪಿಎಂ ಪೋಷಣ್ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ ಸಿಬ್ಬಂದಿಗಳ ನಿರ್ವಹಿಸಬೇಕಾದ ಜವಾಬ್ದಾರಿ ಹಾಗೂ ಯಶಸ್ವಿ ಅನುಷ್ಠಾನ ಕುರಿತು ಮಾತನಾಡಿದರು.

ಡಯಟ್ ಪ್ರಾಚಾರ್ಯರಾದ ಎಂ ಎಸ್ ಹೆಗಡೆ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ನಾಯ್ಕ್, ಅಡುಗೆ ಸಿಬ್ಬಂದಿಯವರ ಕರ್ತವ್ಯ, ಸಮಯ ಪಾಲನೆ,ಶಿಸ್ತು ಕುರಿತು ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರವಿ ಬ ಬೆಂಚಳ್ಳಿ ಇಲಾಖೆಯ ಪೂರಕ ಪೌಷ್ಟಿಕ, ಕ್ಷೀರ ಭಾಗ್ಯ ಹಾಗೂ ಸಿಬ್ಬಂದಿ ನಿರ್ವಹಿಸಬೇಕಾದ ಕಾರ್ಯಕ್ಷಮತೆ ಹಾಗೂ ದಾಖಲೆಗಳ ಬಗ್ಗೆ ಮಾತನಾಡಿದರು.

ಆರೋಗ್ಯ ಇಲಾಖೆಯ ತಾಲೂಕ ವೈದ್ಯಾಧಿಕಾರಿಗಳಾದ ಜಗದೀಶ್ ಯಾಜಿ ಹಾಗೂ ಕಾಶಿ ಭಟ್ ಇವರು ಆಹಾರ ಸುರಕ್ಷತೆ ಗುಣಮಟ್ಟ ಹಾಗೂ ಸಿಬ್ಬಂದಿ ಆರೋಗ್ಯ, ಸ್ವಚ್ಛತೆ ಮತ್ತು ಎಸ್ಓಪಿ ನಿರ್ವಹಣೆ ಬಗ್ಗೆ ಮಾತನಾಡಿದರು. ಕೃಷಿ ಇಲಾಖೆಯ ಅಧಿಕಾರಿಗಳಾದ ನಂದೀಶ್ ಸಿರಿಧಾನ್ಯಗಳ ಮಹತ್ವ ಶಾಲೆಯಲ್ಲಿ ಬಳಸುವ ಕುರಿತು ಉಪನ್ಯಾಸ ನೀಡಿದರು. ವಿಜನ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್ ಬೆಂಗಳೂರು ವತಿಯಿಂದ ಡಾ. ವೈಷ್ಣವಿ ಭಟ್, ದಿವ್ಯ, ಡಾ. ಕೃತಿಕಾ ಇವರು ಅಡುಗೆಯಲ್ಲಿ ಉಪ್ಪಿನ ಕಡಿಮೆ ಬಳಕೆ ಕುರಿತು ಪಿಪಿಟಿ ಮೂಲಕ ಉಪನ್ಯಾಸ ನೀಡಿದರು.

ಹಾಗೆಯೇ ಕ್ಷೇತ್ರ ಸಮನ್ವಯ ಅಧಿಕಾರಿ ದಿನೇಶ್ ಶೆಟ್ ವಿಮಾ ಯೋಜನೆಗಳ ಕುರಿತು ಮಾತನಾಡಿದರು. ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಪ್ರದೀಪ್ ಬಿ ಎಂ ಹಾಗೂ ತಾಲೂಕ ಗ್ಯಾಸ್ ಏಜೆನ್ಸಿಯ ಮಾಲೀಕರಾದ ಗಣೇಶ್ ಆಚಾರಿ ಹಾಗೂ ರಾಘವೇಂದ್ರ ಕಾಮತ್ ಸಿಲಿಂಡರ್ ಬಳಕೆ ಅಗ್ನಿನಂದಕ ಬಳಕೆ ಹಾಗೂ ಅಗ್ನಿ ಅವಘಡಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದಲ್ಲಿ 520 ಅಡುಗೆ ಸಿಬ್ಬಂದಿಗಳು ಹಾಗೂ ತಾಲೂಕಿನ ಸಿಆರ್‌ಪಿ, ಬಿ ಆರ್ ಪಿ, ಅನುಷ್ಠಾನಾಧಿಕಾರಿಗಳು ಹಾಜರಿದ್ದರು. ತಾಲೂಕು ಪಂಚಾಯಿತಿ ಪ್ರ. ದ. ಸ ಲಿಂಗರಾಜ ಶಿರಾಲಿ, ಡಿ ಇ ಓ ಗಂಗಾಧರ ಗೌಡ, ಆಹಾರ ಸಾಗಾಣಿಕೆದಾರರಾದ ಶೇಖರ್ ಶೆಟ್ಟಿ ಎನ್‌ಜಿಒ ಸಂಸ್ಥೆಯ ಮುಖ್ಯಸ್ಥರಾದ ನಾಗೇಂದ್ರಪ್ಪ, ಉತ್ತರ ಕನ್ನಡ ಅಸಂಘಟಿತ ಕಾರ್ಮಿಕರ ಸಂಚಾಲಕರಾದ ನಾಗಪ್ಪ ಹಾಗೂ ತಾಲೂಕಾ ಅಡುಗೆ ಸಹಾಯಕ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಸಿಆರ್ಪಿ ಪ್ರತಿಮಾ ಕೋಮಾರ ಹಾಗೂ ಸುರೇಶ್ ನಾಯ್ಕ್, ಗಣೇಶ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು .

Edited By : Vijay Kumar
Kshetra Samachara

Kshetra Samachara

13/01/2025 12:11 pm

Cinque Terre

6.08 K

Cinque Terre

0