", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/39710820250112093553filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "GN Bhat Yallpur" }, "editor": { "@type": "Person", "name": "7899588538" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಲ್ಲಾಪುರ: ಓವರ್ ಹೆಡ್ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಹಾವು ಪತ್ತೆಯಾದ ಘಟನೆ ರವಿವಾರ ಯಲ್ಲಾಪುರ ತಾಲೂಕಿನ ಮದನೂರು ಸಮೀಪದ ಡೋಮ...Read more" } ", "keywords": "Yellapur, dead snake, water tank, contaminated water, public health, Karnataka news, water pollution, snake found, medical treatment.,Uttara-Kannada,Health-and-Fitness", "url": "https://publicnext.com/node" }
ಯಲ್ಲಾಪುರ: ಓವರ್ ಹೆಡ್ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಹಾವು ಪತ್ತೆಯಾದ ಘಟನೆ ರವಿವಾರ ಯಲ್ಲಾಪುರ ತಾಲೂಕಿನ ಮದನೂರು ಸಮೀಪದ ಡೋಮಗೇರಿ ಗೌಳಿವಾಡಾ ಪ್ರದೇಶದಲ್ಲಿ ನಡೆದಿದೆ.
ಗ್ರಾಮದ ಓವರ್ ಹೆಡ್ ಟ್ಯಾಂಕಿನಿಂದ ಸರಬರಾಜು ಮಾಡುತ್ತಿದ್ದ ನೀರು ಕಲುಷಿತಗೊಂಡು, ದುರ್ವಾಸನೆಯಿಂದ ಕೂಡಿತ್ತು. ನೀರನ್ನು ಕುಡಿದ ಗ್ರಾಮಸ್ಥರಲ್ಲಿ ಕೆಲವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ಥಳಿಯ ಗ್ರಾಮ ಪಂಚಾಯತಿಗೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಟ್ಯಾಂಕ್ ನಲ್ಲಿ ಸತ್ತ ಹಾವು ಪತ್ತೆ
ಸ್ಥಳೀಯರ ಮನವಿಗೆ ಸ್ಪಂದಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಭವ್ಯಾ ದೇವಾಡಿಗ, ಸಮುದಾಯ ಆರೋಗ್ಯಾಧಿಕಾರಿ ಶ್ರದ್ಧಾ ಭಗತ್, ಪಿಡಿಒ ಅಣ್ಣಪ್ಪ ವಡ್ಡರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ರವಿವಾರ ಓವರ್ ಹೆಡ್ ಟ್ಯಾಂಕ್ ಅನ್ನು ಪರಿಶೀಲಿಸಿದಾಗ, ಟ್ಯಾಂಕ್ ನಲ್ಲಿ ಹಾವು ಸತ್ತುಬಿದ್ದಿರುವುದು ಕಂಡುಬಂದಿದೆ. ಕೂಡಲೇ ಟ್ಯಾಂಕ್ ನಲ್ಲಿ ಇದ್ದ ಕಲುಷಿತ ನೀರನ್ನು ಖಾಲಿ ಮಾಡಿಸಿ, ಟ್ಯಾಂಕ್ ಅನ್ನು ಶುಚಿಗೊಳಿಸಿ ಹೊಸ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಯಿತು.
ಗ್ರಾಮಸ್ಥರ ಆರೋಗ್ಯ ತಪಾಸಣೆ
ಆರೋಗ್ಯ ಇಲಾಖೆಯವರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಟ್ಯಾಂಕ್ ನೀರನ್ನು ಸೇವಿಸಿ, ಆರೋಗ್ಯ ಸಮಸ್ಯೆ ಕಂಡುಬಂದ 45 ಜನರಿಗೆ ಸ್ಥಳದಲ್ಲಿ ಚಿಕಿತ್ಸೆ ಮತ್ತು ಆರೋಗ್ಯ ಸಲಹೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ 8 ಜನರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ಜನರು ಆರೋಗ್ಯವಾಗಿದ್ದಾರೆ.
ವಿಷಕಾರಿ ಹಾವು ಇದಲ್ಲ..
ನೀರಿನ ಟ್ಯಾಂಕ್ ನಲ್ಲಿ ಸತ್ತುಬಿದ್ದ ಹಾವು ವಿಷಕಾರಿ ಹಾವು ಅಲ್ಲ ಎಂದು ಹಾವನ್ನು ಪರಿಶೀಲಿಸಿದ ಅರಣ್ಯ ಇಲಾಖೆ ಮತ್ತು ವೈಲ್ಡ್ ಲೈಫ್ ತಂಡದವರು ತಿಳಿಸಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿದ್ದ ಆತಂಕ ನಿವಾರಣೆಯಾಗಿದೆ.
PublicNext
12/01/2025 09:36 pm