ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಸಚಿವ ರಾಜಣ್ಣ ರಾಜೀನಾಮೆಗೆ ಕಾಂಗ್ರೆಸ್‌‍ ಮುಖಂಡರ ಒತ್ತಾಯ

ಹಾಸನ :ಜಿಲ್ಲಾ ಉಸ್ತುವಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲು ವಿಫಲರಾಗಿರುವ ಕೆ.ಎನ್‌ ರಾಜಣ್ಣ ಅವರು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್‌‍ ಮುಖಂಡ ಬನವಾಸೆ ರಂಗಸ್ವಾಮಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲಾ ಉಸ್ತುವಾರಿಯಾಗಿ ಕೆ.ಎನ್‌ ರಾಜಣ್ಣ ಅವರು ಅಧಿಕಾರ ಸ್ವೀಕರಿಸಿ ಸುಮಾರು ಎರಡು ವರ್ಷ ಆಗಿದೆ.ಆದರೆ ಅವರ ಕಾರ್ಯವೈಖರಿ ಸರಿ ಇಲ್ಲ, ಜಿಲ್ಲೆಯ ಕಾಂಗ್ರೆಸ್‌‍ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ. ಹಾಗೂ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ರಾಜ್ಯದ ವರಿಷ್ಠರು ರಾಜಣ್ಣ ಅವರ ಮೇಲೆ ಭರವಸೆಯನ್ನಿಟ್ಟು ಹಾಸನ ಜಿಲ್ಲೆಗೆ ಉಸ್ತುವಾರಿಯಾಗಿ ನೇಮಿಸಿದರು. ಜಿಲ್ಲೆಯಲ್ಲಿ ಜೆಡಿಎಸ್‌‍ ಹಾಗೂ ಬಿಜೆಪಿ ಪಕ್ಷದ ಹಲವಾರು ವರ್ಷಗಳ ಕಿರುಕುಳವನ್ನು ಸಹಿಸಿಕೊಂಡಿರುವ ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಒಳ್ಳೆಯ ಬದುಕು ಕಟ್ಟಿಕೊಡುವ ಭರವಸೆಯನ್ನು ಹೊಂದಲಾಗಿತ್ತು ಆದರೆ ಎಲ್ಲವೂ ಹುಸಿಯಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಎಚ್‌.ಡಿ.ಸಿ.ಸಿ ಬ್ಯಾಂಕ್‌ ಹಾಗೂ ಕೆಎಂಎಫ್‌ ಸಹಕಾರ ಖಾತೆಯಡಿ ಬಂದರೂ ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಯಾವುದೇ ಹ್ದುೆಯನ್ನು ಪಡೆಯುವಲ್ಲಿ ರಾಜಣ್ಣ ಸಹಕರಿಸಿಲ್ಲ ಎಂದು ಆರೋಪಿಸಿದರು.

Edited By : PublicNext Desk
Kshetra Samachara

Kshetra Samachara

11/01/2025 04:14 pm

Cinque Terre

720

Cinque Terre

0

ಸಂಬಂಧಿತ ಸುದ್ದಿ