ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಹಠಾತ್ ಹೃದಯಾಘಾತದಿಂದ ಮಹಿಳೆ ಸಾವು

ಸಕಲೇಶಪುರ: ಹಠಾತ್ ಹೃದಯಾಘಾತದಿಂದ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ತಾಲೂಕಿನ ಹಾನುಬಾಳು ಹೊಬಳಿ ವೆಂಕಟಹಳ್ಳಿ ಗ್ರಾಮದಲ್ಲಿಂದು ನಡೆದಿದೆ. ತಾಲ್ಲೂಕು ವೀರಶೈವ ಸಮಾಜದ ಯುವ ವೇದಿಕೆ ಅಧ್ಯಕ್ಷ ಶಶಿಕುಮಾ‌ರ್ ಅವರ ಪತ್ನಿ ದೀಪಾ (35) ಸಾವನ್ನಪ್ಪಿದ ಮಹಿಳೆ.

ಎಂದಿನಂತೆ ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ದೀಪಾ ಅವರನ್ನು ಪೋಷಕರು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತ ಪಡಿಸಿದರು. ಅವರು ಪತಿ ಓರ್ವ ಪುತ್ರನನ್ನು ಅಗಲಿದ್ದು, ಪೋಷಕರು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಕಿರಿಯ ವಯಸ್ಸಿನಲ್ಲೇ ಹೃದಯಾಘಾತ ಹೆಚ್ಚಾಗುತ್ತಿರುವುದು ಸಹಜವಾಗಿಯೇ ಕಳವಳ ತರಿಸಿದೆ.

Edited By : PublicNext Desk
Kshetra Samachara

Kshetra Samachara

13/01/2025 06:04 pm

Cinque Terre

940

Cinque Terre

0

ಸಂಬಂಧಿತ ಸುದ್ದಿ