ಆಲೂರು :ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಶಾಸಕ ಸಿಮೆಂಟ್ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಲೂರು ತಾಲ್ಲೂಕಿನ ಕಿತ್ತಗೆರೆ ಗ್ರಾಮದಲ್ಲಿ ಅಂಗನವಾಡಿ ಉದ್ಘಾಟನಾ ಸಮಾರಂಭದಲ್ಲಿ ಜನಪ್ರತಿನಿಧಿಗಳಿಗೆ ಗೌರವ ನೀಡಿಲ್ಲವೆಂದು ಶಾಸಕ ಕೆಂಡಾಮಂಡಲ ಆಗಿದ್ದಾರೆ.ನಿಮಗೆಲ್ಲ ಏನಾಗಿದೆ ಅರ್ಥ ಆಗುತ್ತಿಲ್ಲ, ಏತಕ್ಕೆ ಈ ಬೇಜಬ್ದಾರಿ. ಶಿಷ್ಟಾಚಾರದ ಪ್ರಕಾರ ಉದ್ಘಾಟನೆ ನಡೆಯಬೇಕು. ಬೇಕಾಬಿಟ್ಟಿ ಕಾರ್ಯಕ್ರಮ ಮಾಡಬೇಡಿ, ಏನು ತಿಳಿದುಕೊಂಡಿದ್ದೀರಾ.ಸ್ಥಳೀಯ ಜನಪ್ರನಿಧಿಗಳನ್ನ ಸರಿಯಾಗಿ ಕರೆದು ಅವರು ಬಂದಾಗ ಗೌರವಿಸಬೇಕು ಎಂದು ಹರಿಹಾಯ್ದರು.ಕೇವಲ ಟೇಪ್ ಕಟ್ ಮಾಡಿ ಹೋಗ್ತಾರಾ, ಸ್ಥಳೀಯರು ಇರಬಾರದ, ಯಾರು ಹೇಳಿ ಕೊಟ್ಡಿದ್ದು ನಿಮಗೆ.
ಇದೆಲ್ಲ ಒಳ್ಳೆಯದಲ್ಲ ಹೇಳಿದ್ದೀನಿ, ನಾನು ಯಾರ ಹತ್ತಿರ ಏನು ಮಾತನಾಡಲ್ಲ ಅದನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರು.
ಗ್ರಾಮ ಪಂಚಾಯಿತಿ ಸದಸ್ಯನಿಗೆ ಹಾರ ಹಾಕುವ ಯೋಗ್ಯತೆ ಇಲ್ವಾ ನಿಮಗೆ. ಸರಿಯಾಗಿ ಕಾರ್ಯಕ್ರಮ ಮಾಡಿ, ಕಮ್ಯೂನಿಕೇಷನ್ ಮಾಡಿ. ಕಟ್ಟಡ ಹಸ್ತಾಂತರ ಮಾಡಬೇಕಾದರೆ ಅವನ್ಯಾವನು ಗುತ್ತಿಗೆದಾರ ಅವನ್ನನ್ನು ಕರೆಸಿ ಒಳ್ಳೆಯ ಕಾರ್ಯಕ್ರಮ ಮಾಡಬೇಕಲ್ವೇನ್ರಿ. ಎಂಎಲ್‌ಎ ಬರ್ತಾರೆ ಅಂದ್ರೆ ನಿಮಗೆ ಜವಾಬ್ದಾರಿ ಬೇಡವೇ, ಬೇಕಾಬಿಟ್ಟಿ ಮಾಡ್ತಿರಿ ಅಂದ್ರೆ ಸುಮ್ನೆ ಇರ್ತಿನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
14/01/2025 04:42 pm