ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜನವರಿ 11ರಂದು ಸಿಎಂ ಸಿದ್ದರಾಮಯ್ಯ ದ.ಕ.ಜಿಲ್ಲೆಗೆ- ನರಿಂಗಾನ ಕಂಬಳ ಉದ್ಘಾಟನೆ

ಮಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಜ.11ರಂದು ದ.ಕ.ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ನರಿಂಗಾನ ಲವ-ಕುಶ ಜೋಡುಕರೆ ಕಂಬಳವನ್ನು ಉದ್ಘಾಟಿಸಲಿದ್ದಾರೆ.

ಜ.11ರಂದು ಶನಿವಾರ ಸಂಜೆ 5ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು,ಸಂಜೆ 6 ಗಂಟೆಗೆ ಮಂಜನಾಡಿ ತಲುಪಲಿದ್ದಾರೆ. 6:15 ಕ್ಕೆ ಉಳ್ಳಾಲ ತಾಲೂಕಿನ ನರಿಂಗಾನ ಕಂಬಳ ಸಮಿತಿ ವತಿಯಿಂದ ಆಯೋಜಿಸಿರುವ ತೃತೀಯ ವರ್ಷದ ಲವ-ಕುಶ ಜೋಡುಕರೆ “ನರಿಂಗಾನ ಕಂಬಳ"ವನ್ನು ಉದ್ಘಾಟಿಸಲಿದ್ದಾರೆ. ರಾತ್ರಿ 8ಗಂಟೆಗೆ ಮಂಜನಾಡಿಗೆ ಆಗಮನ. 9:40ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಿಎಂ ಬೆಂಗಳೂರಿಗೆ ತೆರಳಲಿದ್ದಾರೆ.

ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ

ಅಂದು ಸಂಜೆ 4ಗಂಟೆಯಿಂದ ರಾತ್ರಿ 10ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ಸಾರ್ವಜನಿಕರು ಈ ಮಾರ್ಗಗಳನ್ನು ಬಳಸದೆ ಬದಲಿ ಮಾರ್ಗ ಉಪಯೋಗಿಸುವಂತೆ ಕೋರಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ-ಕೆಂಜಾರು ಜಂಕ್ಷನ್-ಕಾವೂರು- ಪದವಿನಂಗಡಿ- ಕೆ.ಪಿ.ಟಿ.ವೃತ್ತ - ರಾಷ್ಟ್ರೀಯ ಗ್ರಾಮ ಮಂಜಕ ನಂತೂರು ವೃತ್ತ- ಪಂಪುವೆಲ್-ಕಲ್ಲಾಪು- ತೊಕ್ಕೊಟ್ಟು ಕುತ್ತಾರುಪದವು- ದೇರಳಕಟ್ಟೆ- ನಾಟೆಕಲ್-ಮಂಜನಾಡಿ ಗ್ರಾಪಂ ಜಂಕ್ಷನ್-ತೌಡುಗೋಳಿ ಕ್ರಾಸ್ ಪಂಚಾಯತ್ ವಾಪಾಸ್ನಾಡಿ. ಮೂಲಕ ನರಿಂಗಾನ ಕಂಬಳ ಸ್ಥಳ.

ಆದ್ದರಿಂದ ಮೇಲೆ ತಿಳಿಸಿರುವ ಮಾರ್ಗದಲ್ಲಿ ಸದರಿ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಸಾರ್ವಜನಿಕರು ಈ ಕೆಳಕಂಡ ಪರ್ಯಾಯ ಮಾರ್ಗದ ಮೂಲಕ ಸಂಚರಿಸಬಹುದು.

* ಕಾವೂರಿನಿಂದ - ಕೆಪಿಟಿ ವೃತ್ತಕ್ಕೆ ಪರ್ಯಾಯ ಮಾರ್ಗವಾಗಿ ಕೂಳೂರು ಮೂಲಕ.

* ಕೆ.ಪಿ.ಟಿ.ವೃತ್ತದಿಂದ-ನಂತೂರು/ಪಂಪ್ವಲ್ ಕಡೆಗೆ ಪರ್ಯಾಯ ಮಾರ್ಗವಾಗಿ ಬಟ್ಟಗುಡ್ಡೆ ಮೂಲಕ ನಗರದೊಳಗಿನಿಂದ.

* ನಂತೂರು/ಪಂಪುವಲ್‌ ನಿಂದ ದೇರಳಕಟ್ಟೆ / ಕೋಣಾಜೆ ಕಡೆಗೆ ಬದಲಿ ಮಾರ್ಗವಾಗಿ ಅಡ್ಯಾರ್ ಹೊಸ ಬ್ರಿಡ್ಜ್ ಮೂಲಕ.

*ನಾಟೆಕಲ್‌ನಿಂದ-ನರಿಂಗಾನಕ್ಕೆ ಪರ್ಯಾಯ ಮಾರ್ಗವಾಗಿ ನಡುಪದುವು/ಕಂಬಳಪದವು-ಮೊಂಟುಗೋಳಿ ಮೂಲಕ ಅಥವಾ ಮುಡಿಪು-ಮೊಂಟುಗೋಳಿ ಮೂಲಕ ಸಂಚರಿಸಬಹುದು.

* ಮಂಜನಾಡಿ ಕಡೆಯಿಂದ ನರಿಂಗಾನ ಕಂಬಳ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತೌಡುಗೊಳಿ ಕ್ರಾಸ್ ಮೂಲಕ

* ನರಿಂಗಾನ ಕಂಬಳಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್‌ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು.

ಕಾರ್ಯಕ್ರಮ ನಡೆಯಿವ ಸಂಜೆ ನಾಟೇಕಲ್ ಜಂಕ್ಷನ್ ನಿಂದ ನರಿಂಗಾನದ ವರೆಗೆ ವಿರುದ್ಧ ದಿಕ್ಕಿನಲ್ಲಿ ಘನ ಸರಕು ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

10/01/2025 10:57 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ