ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಕ್ಸಲರ ಶರಣಾಗತಿ - ಪಶ್ಚಿಮ ಘಟ್ಟದ ತಪ್ಪಲಿನ ಮಲೆಕುಡಿಯರನ್ನು ಕೇಳುವವರೇ ಇಲ್ಲ!

ಹೆಬ್ರಿ: ನಕ್ಸಲರ ಶರಣಾಗತಿ ಪ್ರಕ್ರಿಯೆ ಮುಗಿದಿದೆ. ಶರಣಾಗಿರುವ ನಕ್ಸಲರಿಗೆ ಪ್ಯಾಕೇಜ್‌ಗಳು ಘೋಷಣೆಯಾಗಲಿವೆ. ಈ ನಡುವೆ ನಕ್ಸಲ್ ಪೀಡಿತ ಪ್ರದೇಶದ ಮಲೆಕುಡಿಯ ಜನಾಂಗದವರು, ತಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಮಲೆಕುಡಿಯ ಜನಾಂಗದವರು, ತಾವು ಮುಖ್ಯ ವಾಹಿನಿಯಲ್ಲಿ ಉಳಿಯುವುದಕ್ಕಾಗಿ ಹೆಣಗಾಡುತ್ತಿದ್ದಾರೆ. ನಕ್ಸಲರ ಶರಣಗಾತಿಯ ಸಂದರ್ಭದಲ್ಲೇ ತಮ್ಮ ಬೇಡಿಕೆಗಳ ಪಟ್ಟಿ ಹಿಡಿದು ಕಾಯುತ್ತಿದ್ದಾರೆ.

ನಕ್ಸಲರ ಶರಣಾಗತಿ ಬಳಿಕ ಪಶ್ಚಿಮ ಘಟ್ಟದ ತಪ್ಪಲು ಮತ್ತು ಮಲೆನಾಡಿನಲ್ಲಿ ಇನ್ನು ನಕ್ಸಲರ ಕೆಂಪು ಚರಿತ್ರೆ ಬಹುತೇಕ ಕೊನೆಗೊಳ್ಳಲಿದೆ. ಹಾಗಂತ ನಕ್ಸಲ್ ಪೀಡಿತ ಪ್ರದೇಶಗಳ ಜನರ ಪರಿಸ್ಥಿತಿ ಸುಧಾರಣೆಯಾಗುತ್ತದೆಯೇ ? ಖಂಡಿತ ಇಲ್ಲ‌.

ಉಡುಪಿಯ ನಕ್ಸಲ್ ಪೀಡಿತ ಅರಣ್ಯದಂಚಿನಲ್ಲಿ ಮಲೆಕುಡಿಯ ಸಮುದಾಯದ ಜನರು ಹರಡಿಕೊಂಡಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯ ಇನ್ನೂ ಮರೀಚಿಕೆ. ಮಲೆಕುಡಿಯರ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ವಿಶೇಷ ಅನುದಾನದ ಬೇಡಿಕೆಯನ್ನು ಮುಖಂಡರು ಇಟ್ಟು ಬಹಳ ವರ್ಷಗಳಾಗಿವೆ. ಸರಕಾರ ಇನ್ನೂ ಅನುದಾನ ನೀಡಿಲ್ಲ.

ಈ ಭಾಗದ ಕೃಷಿ ಭೂಮಿ ರಹಿತರಿಗೆ 400 ಎಕರೆ ಜಾಗ ಬೇಕು, ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯದಿಂದ ಸ್ವಯಿಚ್ಛೆಯಿಂದ ಹೊರ ಬಂದರೆ ಬದುಕು ಕಟ್ಟಿಕೊಳ್ಳಲು ಏನು ಮಾಡುವುದು? ಇದು ಇವರ ಪ್ರಶ್ನೆ.ನಮ್ಮ ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಕಲ್ಪಿಸುವುದು ಯಾವಾಗ? ಪರಿಶಿಷ್ಟ ಪಂಗಡ ಒಳಮೀಸಲಾತಿಯೂ ಜಾರಿಗೊಂಡಿಲ್ಲ. ಇನ್ನು ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡಿಕೆಯೂ ಬಾಕಿ ಇದೆ.

600 ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ಈ ಭಾಗದಲ್ಲಿ ವಾಸ ಮಾಡುತ್ತಿದ್ದು ಕಾಡುತ್ಪತ್ತಿಯನ್ನೇ ನಂಬಿ ಜೀವನ ಮಾಡುತ್ತಿವೆ. ರಸ್ತೆ, ವಿದ್ಯುತ್ ಇವರಿಗೆ ಇಪ್ಪತ್ತೊಂದನೇ ಶತಮಾನದಲ್ಲೂ ದಕ್ಕಿಲ್ಲ. ನಕ್ಸಲರು ಈ ಊರಿನ ಕಾಡುಗಳಿಂದ ಶರಣಾಗಿದ್ದಾರೆ. ಆದರೆ ಮಲೆಕುಡಿಯರ ಬದುಕು ಇನ್ನೂ ಬದಲಾಗಿಲ್ಲ. ಸರಕಾರ ಇನ್ನಾದರೂ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಮಲೆಕುಡಿಯ ಜನಾಂಗದ ಮುಖಂಡರು ಒತ್ತಾಯ ಮಾಡಿದ್ದಾರೆ.

ವರದಿ: ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್ ಉಡುಪಿ

Edited By : Ashok M
PublicNext

PublicNext

10/01/2025 10:24 pm

Cinque Terre

9.17 K

Cinque Terre

0

ಸಂಬಂಧಿತ ಸುದ್ದಿ