ಮಂಗಳೂರು: ಕಮಿಷನ್ ರೂಪದಲ್ಲಿ ಹಣ ಗಳಿಸುವ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು ಅನಾಮಿಕರಿಂದ 9 ಲಕ್ಷರೂ.ಗೂ ಹೆಚ್ಚು ವಂಚನೆಗೊಳಗಾದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಸುಮಾರು 1 ವರ್ಷ ಹಿಂದೆ ಅಪ್ಪಾ ಎಂಬ ಪೋರ್ಟಲ್‌ನಲ್ಲಿ ಅವರ ಹೆಸರು ಮತ್ತು ಮೊಬೈಲ್ ನಂಬ್ರವನ್ನು ದಾಖಲಿಸಿದ್ದರು. ಅವರಿಗೆ ನಿಶಾ ಅಗರ್ವಾಲ್ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ ಕರೆಮಾಡಿ, ಟೆಲಿಗ್ರಾಮ್ ಆ್ಯಪ್‌ನ ಗ್ರೂಪ್‌ಗೆ ಸೇರುವಂತೆ ಸೂಚಿಸಿದ್ದಳು. ಸೇರಿದ ಬಳಿಕ ಲಿಂಕೊಂದನ್ನು ಕಳುಹಿಸಿದ್ದು, ಅದರಿಂದ ದೂರುದಾರರು ಏರ್‌ಪಾಝ್ ಎಂಬ ಆಪ್ ಡೌನ್ ಲೋಡ್ ಮಾಡಿಕೊಂಡಿರುತ್ತಾರೆ. ಮಹಿಳೆಯು ಟೆಲಿಗ್ರಾಮ್ ಆ್ಯಪ್ ಮೂಲಕ ವಿವಿಧ ಬ್ಯಾಂಕ್ ಗಳ ಖಾತೆಗಳಿಗೆ ಹಣ ಜಮೆ ಮಾಡಲು ತಿಳಿಸಿದ್ದಳು. ಅದರಿಂದ ತಮಗೆ ಬೇರೆ ಬೇರೆ ರೀತಿಯಲ್ಲಿ ಕಮಿಷನ್ ಬರುತ್ತದೆ ಎಂದು ನಂಬಿಸಿದ್ದಳು.
ಅದರಂತೆ ದೂರುದಾರರು 2024ರ ಡಿ. 14ರಿಂದ 2025ರ ಜ. 3ರ ವರೆಗೆ 9 ಲಕ್ಷ ರೂ.ಗೂ ಅಧಿಕ ಹಣ ಜಮೆ ಮಾಡಿದ್ದಾರೆ. ಬಳಿಕ ವಂಚನೆ ಅರಿವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
Kshetra Samachara
10/01/2025 10:02 pm