ಕೊಲ್ಲೂರು: ಭಾರತದ ಪ್ರಖ್ಯಾತ ಗಾಯಕ, ದಕ್ಷಿಣಾದಿ ಸಂಗೀತ ದಿಗ್ಗಜ, ಸಂಗೀತ ಮಾಂತ್ರಿಕ ಯೇಸುದಾಸ್ ಅವರು ಇಂದು 85ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕೆ ಕ್ಷೇತ್ರದಲ್ಲಿ ಆಚರಿಸಿಕೊಂಡು ಬರುತ್ತಿದ್ದರು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಕಾರಣ ಕೋವಿಡ್ ಮಹಾಮಾರಿ ಸೋಂಕಿನ ನಂತರ ತಮ್ಮ ಈ ಪರಿಪಾಠವನ್ನು ನಿಲ್ಲಿಸಿದ್ದರು.
ಇದೀಗ ಸ್ವರ ಮಾಂತ್ರಿಕನ ಅಭಿಮಾನಿಗಳು ಶ್ರೀಮೂಕಾಂಬಿಕೆ ದೇವಿಯ ಸನ್ನಿಧಾನದಲ್ಲಿ ದೇವರ ಸ್ತುತಿಯನ್ನು ಹಾಡುವ ಮೂಲಕ ನೆಚ್ಚಿನ ಕಲಾವಿದನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇಂದು ಕೂಡ ಹಲವಾರು ಕಲಾವಿದರು ಕೊಲ್ಲೂರು ಶ್ರೀ ದೇವಿಯ ಸನ್ನಿಧಾನದಲ್ಲಿ ಪದ್ಮ ವಿಭೂಷಣ ಯೇಸುದಾಸ್ ಅವರ ಹುಟ್ಟುಹಬ್ಬವನ್ನು ಸಂಗೀತ ಸೇವೆಯ ಮೂಲಕ ಆಚರಿಸಿದರು. ಅಭಿಮಾನಿ ಭಕ್ತರಿಂದ ಯೇಸುದಾಸ್ ಅವರ ಹೆಸರಲ್ಲಿ ದೇವರಿಗೆ ವಿಶೇಷ ಪೂಜೆ, ಸೇವೆಗಳು ಸಲ್ಲಿಕೆಯಾದವು.
PublicNext
10/01/2025 09:50 pm