ಬ್ರಹ್ಮಾವರ: ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಮೂಡುಕೇರಿ ಬಾರಕೂರು ಹಾಗೂ ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ವತಿಯಿಂದ ವೈಕುಂಠ ಏಕಾದಶಿ ಮಹೋತ್ಸವ ನಡೆಸಲಾಯ್ತು. ಇನ್ನು ಭಕ್ತರಿಗೆ ವೈಕುಂಠ ಧ್ವಾರ ಮೂಲಕ ದೇವಸ್ಥಾನಕ್ಕೆ ಬರುವ ವ್ಯವಸ್ಥೆ ಮಾಡಲಾಗಿತ್ತು.
ಬೆಳಿಗ್ಗೆ 6 ಗಂಟೆಯಿಂದ ದೇವಸ್ಥಾನದ ಶ್ರೀ ಅನ್ನಪೂರ್ಣೆಶ್ವರಿ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ವಿಶಿಷ್ಟ ಪೂಜೆ, ಅಲಂಕಾರ ನೆರವೇರಿಸಲಾಯ್ತು. ಜಿಲ್ಲೆಯ ನಾನಾ 10 ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.
ಬ್ರಹ್ಮಾವರ, ಕೆಮ್ಮಣ್ಣು, ತೆಂಕನಿಡಿಯೂರು, ಉಡುಪಿ, ಉದ್ಯಾವರ, ಬಾರಕೂರು ವಲಯ ಮತ್ತು ಗಾಣಿಗ ಯುವ ಸಂಘಟನೆ ಕೋಟ, ಶ್ರೀ ವೇಣುಗೋಪಾಲ ಕೃಷ್ಣ ಯುವಕ ಸಂಘ ಬಾರಕೂರು, ಎಜ್ಯುಕೇಶನಲ್ ಸೊಸೈಟಿ, ಸೌಹಾರ್ದ ಸಹಕಾರಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
ನಾನಾ ಭಾಗದ ಭಕ್ತರು ಆಗಮಿಸಿ ವೈಕುಂಠ ಏಕಾದಶಿ ಮಹೋತ್ಸವದಲ್ಲಿ ಭಾಗಿಯಾಗಿ ವಿಶೇಷ ಫಲಹಾರ ಮತ್ತು ತಿರುಪತಿಯ ಲಡ್ಡು ಪ್ರಸಾದ ಸ್ವೀಕರಿಸಿದರು.
PublicNext
10/01/2025 04:37 pm