ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ವಿದ್ಯುತ್ ಸಂಪರ್ಕ-ಮೂಲಭೂತ ಸೌಕರ್ಯದೊಂದಿಗೆ ಮನೆಗಳ ಹಂಚಿಕೆ : ಬಲ್ಕೀಶ್ ಬಾನು

ಶಿವಮೊಗ್ಗ : ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಿಗೆ ಅಗತ್ಯವಿರುವ ವಿದ್ಯುತ್ ಮತ್ತು ನೀರಿನ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗುವುದು ಎಂದು ವಿಧಾನಪರಿಷತ್ ಶಾಸಕರಾದ ಶ್ರೀಮತಿ ಬಲ್ಕೀಶ್ ಬಾನು ತಿಳಿಸಿದರು.

ಶುಕ್ರವಾರ ಸಂಜೆ 4 ಗಂಟೆಗೆ ಅವರು ಗೋವಿಂದಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ವಸತಿ ಸಮುಚ್ಚಯವನ್ನು ಮಹಾನಗರಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಇಲಾಖೆಯ ಇಂಜಿನಿಯರ್ ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿ, ಇಂಜಿನಿಯರ್ ಗಳಿಗೆ ಸೂಕ್ತಸಲಹೆ- ಸೂಚನೆ ನೀಡಿದರು.

ಮಹಾನಗರಪಾಲಿಕೆಯ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗೋವಿಂದಾಪುರದಲ್ಲಿ ಒಟ್ಟು ರೂ.260 ಕೋಟಿ ಅನುದಾನದಲ್ಲಿ 3000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 624 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ 652 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಬಂದು ಪರಿಶೀಲಿಸುತ್ತಾರೆ. ನಂತರ ವಸತಿ ಸಚಿವರ ಸಮ್ಮುಖದಲ್ಲೇ ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

Edited By : Abhishek Kamoji
Kshetra Samachara

Kshetra Samachara

10/01/2025 06:36 pm

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ