ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಪೂರ್ವಜರ ಜೈವಿಕ ಬದುಕಿನ ವೈಜ್ಞಾನಿಕ ಅಧ್ಯಯನ ಅಗತ್ಯ - ಪ್ರೊ.ಶರತ್ ಅನಂತಮೂರ್ತಿ

ಶಿವಮೊಗ್ಗ : ಆಧುನಿಕ ಜೀವನದಲ್ಲಿ ನಾವು ದೈನಂದಿನ ಜೀವನದಲ್ಲಿ ಪ್ರತಿ ಕಾರ್ಯಕ್ಕೂ ರಾಸಾಯನಿಕಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ನಮ್ಮ ಪೂರ್ವಜರು ರಾಸಾಯನಿಕಗಳನ್ನು ಬಳಸದೆ ಜೈವಿಕವಾಗಿ ಬದುಕಿ ತೋರಿಸಿದ್ದಾರೆ. ಈಗ ಅಂಥವರನ್ನು ವೈಜ್ಞಾನಿಕ ಚೌಕಟ್ಟಿನಲ್ಲಿಟ್ಟು ನೋಡುವ ಅಗತ್ಯ ಇದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ಭದ್ರಾವತಿ ತಾಲೂಕಿ‌ನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಹಾಗೂ ಡಿಎಸ್‌ಟಿ-ಎಸ್‌ಇಆರ್‌ಬಿ ನವದೆಹಲಿ ಇವರ ಪ್ರಯೋಜಕತ್ವದಲ್ಲಿ ಮ್ಯೂಕೋ ರ್ಮೈಕೋಸಿಸ್ ಮೇಲೆ ಔಷಧೀಯ ಸಸ್ಯಗಳ ಮತ್ತು ಅವುಗಳ ಚಯಾಪಚಯ ಕ್ರಿಯೆಗಳ ಜೈವಿಕ ಶೋಧನೆ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೋವಿಡ್‌-19 ನಂತರ ಮ್ಯೂಕೋರ್ಮೈಕೋಸಿಸ್(ಬ್ಲ್ಯಾಕ್ ಫಂಗಸ್)ನಿಂದ ಬಾಧಿತರಾಗಿ ರಾಜ್ಯಾದ್ಯಂತ ಹಲವು ಜನರು ಸಾವನ್ನಪ್ಪಿದ್ದರು. ಇದನ್ನು ನಿಯಂತ್ರಿಸುವ ಮತ್ತು ಪರಿಹಾರ ಹುಡುಕುವ ಉದ್ದೇಶದಿಂದ ಪಶ್ಚಿಮ ಘಟ್ಟಗಳಲ್ಲಿರುವ ಔಷಧೀಯ ಸಸ್ಯಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಪ್ರೊ. ಬಿ.ತಿಪ್ಪೇಸ್ವಾಮಿ ಅವರು ಸಂಶೋಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

Edited By : Abhishek Kamoji
Kshetra Samachara

Kshetra Samachara

10/01/2025 06:34 pm

Cinque Terre

1.82 K

Cinque Terre

0

ಸಂಬಂಧಿತ ಸುದ್ದಿ