ಬೆಂಗಳೂರು : ಮುಂದಿನ ವಾರ ಅಂದ್ರೆ ಸಂಕ್ರಾಂತಿ ಹಬ್ಬದಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಎಐಸಿಸಿ ನೂತನ ಕಚೇರಿ ಉದ್ಘಾಟನೆ ಹಿನ್ನೆಲೆ ಸಿಎಂ ಡಿಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಸಿಎಂ ಡಿಸಿಎಂ ಜೊತೆ ಕೆಲ ಸಚಿವರು ಸಹ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಎಐಸಿಸಿ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ಜೋರಾಗಿರುವ ಕಾರಣ ಹೈಕಮಾಂಡ್ ಜೊತೆ ಚರ್ಚೆಗೆ ಸಿಎಂ ಡಿಸಿಎಂ ಮತ್ತು ಸಚಿವರು ನಿರ್ಧಾರಿಸಿದ್ದಾರೆ.
ಪ್ರಮುಖವಾಗಿ ಸಂಪುಟ ಪುನರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಒಂದು ಬಣ ಹೈಕಮಾಂಡ್ ಜೊತೆ ಚರ್ಚೆ ಮಾಡಲು ಸಜ್ಜಾಗಿದೆ.
ಇನ್ನೊಂದೆಡೆ ಪರಮೇಶ್ವರ್ ಹೈಕಮಾಂಡ್ ನಾಯಕರನ್ನ ಪ್ರತ್ಯೇಕವಾಗಿ ಭೇಟಿಯಾಗಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ದಲಿತ ಸಮುದಾಯದ ಸಚಿವರ ಡಿನ್ನರ್ ನಡೆಸಲು ತೀರ್ಮಾನಿಸಿದ್ದೇವು, ಆದ್ರೆ ಇದನ್ನ ಅಪಾರ್ಥ ಮಾಡಿಕೊಂಡು ನಿಲ್ಲಿಸಿದ್ದಾರೆ. ಇದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಹಿನ್ನಡೆಯಾಗಲಿದೆ. ದಲಿತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ ಹಾಗಾಗಿ ಸಭೆ ನಡೆಸೋಕೆ ಅನುಮತಿ ಕೊಡಿ ಎಂದು ಬೇಡಿಕೆ ಈಡುವ ಸಾಧ್ಯತೆ ಇದೆ.
ಒಟ್ಟಾರೆ ಡಿನ್ನರ್ ಪಾಲಿಟಿಕ್ಸ್ ದೆಹಲಿ ಅಂಗಳಕ್ಕೆ ತಲುಪುತ್ತಿದೆ, ಆದ್ರೆ ರಾಜ್ಯದ ನಾಯಕರ ಭೇಟಿಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡಲಿದ್ಯಾ? ನಿಧನವಾಗಿ ಹಬ್ಬಿರುವ ಡಿನ್ನರ್ ಪಾಲಿಟಿಕ್ಸ್ ರಾಜಕೀಯವನ್ನ ಹೈಕಮಾಂಡ್ ತಣ್ಣಾಗಾಗಿಸಲಿದ್ಯಾ ಕಾದು ನೋಡಬೇಕಿದೆ.
PublicNext
09/01/2025 06:16 pm