ಬಂಟ್ವಾಳ: ಓವರ್‌ಟೇಕ್ ಮಾಡುವ ಭರದಲ್ಲಿ ಕೆಎಸ್ಆರ್‌ಟಿಸಿ ಬಸ್ಸೊಂದು ಆ್ಯಂಬುಲೆನ್ಸ್‌ಗೆ ಡಿಕ್ಕಿಯಾದ ಘಟನೆ ಬಂಟ್ವಾಳ ಬೈಪಾಸ್ ಬಳಿ ಸಂಭವಿಸಿದೆ.
ಚಿಕ್ಕಮಗಳೂರಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸುತ್ತಿದ್ದ ಈ ಆಂಬ್ಯುಲೆನ್ಸ್‌ನಲ್ಲಿ ರೋಗಿ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ಆಂಬ್ಯುಲೆನ್ಸ್ ಬೈಪಾಸ್‌ಗೆ ಬರುತ್ತಿದ್ದಂತೆ ಕೆಎಸ್ಆರ್‌ಟಿಸಿ ಬಸ್ಸೊಂದು ಓವರ್‌ಟೇಕ್ ಮಾಡಲು ಯತ್ನಿಸಿ ಡಿಕ್ಕಿಯಾಗಿದೆ. ಅಪಘಾತವಾದದ್ದು ತಿಳಿದರೂ ಬಸ್ ಚಾಲಕ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ.
ಬಸ್ ಡಿಕ್ಕಿಯಾಗುವ ದೃಶ್ಯ ಆ್ಯಂಬುಲೆನ್ಸ್ ಡ್ಯಾಶ್ ಬೋರ್ಡ್‌ನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Kshetra Samachara
09/01/2025 12:49 pm