ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಣ್ಣ ನೀರಾವರಿ ಇಲಾಖೆ ಇಇ ಬಂಧನ

ಧಾರವಾಡ : ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೊಬ್ಬರ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಧಾರವಾಡ ಸಣ್ಣ ನೀರಾವರಿ ಇಲಾಖೆ ಧಾರವಾಡ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ದೇವರಾಜ ಶಿಗ್ಗಾಂವಿ ಎಂಬುವವರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿಯ ಗುತ್ತಿಗೆದಾರ ಆರ್.ಎನ್.ನಾಯಕ ಎಂಬುವವರು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಕೆಲಸವನ್ನು ಕಳೆದ 30 ವರ್ಷಗಳ ಹಿಂದೆಯೇ ಮಾಡಿದ್ದರು. ಈ ಕಾಮಗಾರಿ ಮೊತ್ತವಾದ 18 ಲಕ್ಷ ರೂಪಾಯಿಯನ್ನು ಇಲಾಖೆ ಬಾಕಿ ಇರಿಸಿಕೊಂಡಿತ್ತು. ಈಗ ಆ ಮೊತ್ತ ಹಾಗೂ ಬಡ್ಡಿ ಸೇರಿ 3 ಕೋಟಿ 34 ಲಕ್ಷ ರೂಪಾಯಿ ಆಗಿದೆ.

ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ತಮ್ಮ ಬಿಲ್‌ನ್ನು ಕೊಡದೇ ವಿಳಂಬ ಮಾಡಿದ್ದಾರೆ ಎಂದು ಗುತ್ತಿಗೆದಾರ ಆರ್.ಎನ್.ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಾದ-ಪ್ರತಿವಾದ ನಡೆದು ಎಂಜಿನಿಯರ್ ಪರ ವಕೀಲರು ಹಣ ಪಾವತಿಗೆ 15 ದಿನಗಳ ಕಾಲಾವಕಾಶ ಕೋರಿದ್ದರು. ಈ ಮನವಿಗೆ ಒಪ್ಪದ ನ್ಯಾಯಾಧೀಶರು ಎಂಜಿನಿಯರ್‌ಗೆ ಬಾಡಿ ವಾರಂಟ್ ಜಾರಿ ಮಾಡಿ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದ್ದರು.

ಸದ್ಯ ಗುತ್ತಿಗೆದಾರರ ಬಾಕಿ ಮೊತ್ತ ಪಾವತಿಸದೇ ವಿಳಂಬ ಮಾಡಿದ್ದರಿಂದ ಇದೀಗ ಬಂಧನಕ್ಕೊಳಗಾಗಬೇಕಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/01/2025 01:03 pm

Cinque Terre

207.27 K

Cinque Terre

4

ಸಂಬಂಧಿತ ಸುದ್ದಿ