ಕುಂದಗೋಳ : ಹಿಂದುಳಿದ ಕುಂದಗೋಳ ತಾಲೂಕಿನಲ್ಲಿ ಅದೆಷ್ಟೋ ಮೂಲ ಸೌಕರ್ಯಗಳ ಸಮಸ್ಯೆ ಜೀವಂತ ಇರುವಾಗಲೇ ತಾಲೂಕು ಪಂಚಾಯಿತಿ ಮಾತ್ರ ಕೇವಲ ಸೋಲಾರ್ ದೀಪಕ್ಕೆ 5.98.800 ರೂಪಾಯಿ ಹಣ ವಿನಾಕಾರಣ ಖರ್ಚು ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.
ಹೌದು ! ಕುಂದಗೋಳ ತಾಲೂಕು ಪಂಚಾಯಿತಿ ಸರ್ಕಾರಿ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5-30, ಈ ಸಮಯ ಬಿಟ್ಟು ರಾತ್ರಿ ವೇಳೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ಕೆಲಸ ಮಾಡುತ್ತಾರಾ ಇಲ್ಲಾ !
ಪರಿಸ್ಥಿತಿ ಹೀಗಿದ್ದರೂ, ತಾಲೂಕು ಪಂಚಾಯಿತಿ ಆವರಣದಲ್ಲಿ ಬರೋಬ್ಬರಿ 6 ಸೋಲಾರ್ ದೀಪಗಳನ್ನು ಅಳವಡಿಸಿ 5.98.800 ರೂಪಾಯಿ 2024-25ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ನೀಡಿದ ಹೆಚ್ಚುವರಿ ಅನುದಾನದಲ್ಲಿ ಖರ್ಚು ಹಾಕಲಾಗಿದೆ.
ಮುಖ್ಯವಾಗಿ ಮೊದಲೇ ತಾಲೂಕು ಪಂಚಾಯಿತಿ ಆವರಣದಲ್ಲಿ ಇದ್ದ ಹಳೆಯ ಹೈ ಮಾಸ್ಕ್ ದೀಪ ದುರಸ್ತಿ ಮಾಡದೆ ಕೈ ಬಿಟ್ಟು ಹೊಸದಾಗಿ 6 ಸೋಲಾರ್ ದೀಪಗಳನ್ನು ಯಾಕೆ ಅಳವಡಿಸಿದ್ದಾರೆ ಎಂಬುದು ಸಂಶಯಕ್ಕೆ ಗುರಿಯಾಗಿದೆ.
ಇದಲ್ಲದೇ ತಾಲೂಕು ಪಂಚಾಯಿತಿಗೆ ವಿವಿಧ ಮನವಿ, ಹೋರಾಟ, ಪ್ರತಿಭಟನೆ ಸಾರ್ವಜನಿಕ ಕೆಲಸಕ್ಕೆ ಬಂದ ಜನರಿಗೆ ಸರಿಯಾಗಿ ಕೂರಲು ಆಸನಗಳೇ ಇಲ್ಲದೆ ನೆಲ, ಗಿಡ ಮರ, ಕಟ್ಟೆಯಲ್ಲಿ ಜನ ಕೂರುವ ದುಸ್ಥಿತಿ ಇದ್ದರೂ ಸೋಲಾರ್ ದೀಪಗಳ ಅವಶ್ಯಕತೆ ಇತ್ತೆ ಎಂಬುದು ಪ್ರಶ್ನೆಯಾಗಿದೆ ?
ಒಟ್ಟಾರೆ ಸೋಲಾರ್ ದೀಪ ಅಳವಡಿಕೆ ಕೆಲಸ ಮಾಡಿದ ಜಾನು ಎಂಟರ್ ರ್ಪ್ರೈಸಸ್, ಎಲ್.ಕೆ.ಅಸೋಸಿಯೆಟ್ ಮತ್ತು ತಾಪಂ ಅಧಿಕಾರಿಗಳ ಮಧ್ಯೆ ಒಳ ಒಪ್ಪಂದ ಏನು ನಡೆದಿದೆಯೋ ? ದೇವರಿಗೆ ಗೊತ್ತು ! ಆದರೆ ಸಾರ್ವಜನಿಕರ ಹಣ ಅನಾವಶ್ಯಕವಾಗಿ ಖರ್ಚಾಗಿದೆ ಎಂಬ ಚರ್ಚೆ ಎದ್ದಿದೆ.
ಶ್ರೀಧರ್ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
08/01/2025 12:40 pm