ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ:ಬಸ್‌ನಿಂದ ವಿದ್ಯಾರ್ಥಿ ರಸ್ತೆಗೆ ಎಸೆಯಲ್ಪಟ್ಟ ಪ್ರಕರಣ ಸಾಬೀತು-ಬಸ್ ಚಾಲಕ, ನಿರ್ವಾಹಕನಿಗೆ ಶಿಕ್ಷೆ

ಸುಳ್ಯ: ಬಸ್‌ನಿಂದ ವಿದ್ಯಾರ್ಥಿ ರಸ್ತೆ ಗೆಸೆಯಲ್ಪಟ್ಟ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಕಳೆದ 2019 ಆ.24ರಂದು ಘಟನೆ ನಡೆದಿದ್ದು, ಆಪಾದಿತ ಚಾಲಕ ವಿಷ್ಣು ಕುಮಾರ್ ಮತ್ತು ನಿರ್ವಾಹಕ ವಿಜಯಕುಮಾರ್ ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಬಸ್ ಸಂಚರಿಸುವ ವೇಳೆ ನಿರ್ಲಕ್ಷ್ಯದಿಂದ ಬಸ್‌ನ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸದೆ, ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಡಬ ತಾಲೂಕಿನ ಬೆಳಂದೂರು ಎಂಬಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮುಹಮ್ಮದ್ ಅಫೀಸ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಮುಖ, ತಲೆ, ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್‌ಸಿ* ನ್ಯಾಯಾಧೀಶೆ ಅರ್ಪಿತಾ ಆರೋಪಿಗಳ ಅಪರಾಧ ಸಾಬೀತಾಗಿ* ದ್ದು ಅವರನ್ನು ದೋಷಿ ಎಂದು ಘೋಷಿಸಿ, ಒಂದನೇ ಆರೋಪಿಗೆ ಕಲಂ 279 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು 1000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ, ಎರಡನೇ ಆರೋಪಿಗೆ ಕಲಂ 336 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು 250 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ ಶಿಕ್ಷೆಗೆ ಆದೇಶ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

08/01/2025 08:20 am

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ