ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆಗಳು ಇರುತ್ತವೆ ಆ ಸಮಸ್ಯೆಗಳ ಮಧ್ಯೆ ಪ್ರತಿಯೊಬ್ಬರು ಖುಷಿಯಾಗಿರುವುದು ಅಷ್ಟೇ ಮುಖ್ಯವಾಗಿರುತ್ತದೆ. ಸದ್ಯ ಖುಷಿಯಾಗಿರಲು ಕೆಲವು ಟಿಪ್ಸ್‌ಗಳಿಗೆ ಅವುಗಳನ್ನು ಫಾಲೋ ಮಾಡಿದ್ರೆ ಹ್ಯಾಪಿ ಹ್ಯಾಪಿ ಆಗಿರಬಹುದು...
ಇವತ್ತಿನಂತೆ ನಾಳೆ ಇರುವುದಿಲ್ಲ ಎನ್ನುವ ಅರಿವಿರಲಿ : ಈ ಸಮಯ ಕಳೆದುಹೋಗುತ್ತದೆ ಈ ಮಾತು ಅಕ್ಷರ ಸಹ ಸತ್ಯ ಕಷ್ಟ ಎನ್ನುವುದು ಕಳೆದುಹೋಗುತ್ತದೆ. ಇವತ್ತು ನಾವು ಕಷ್ಟದ ಜೀವನ ನಡೆಸುತ್ತಿರಬಹುದು. ನಾಳೆಯೂ ಕೂಡ ಇದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇವತ್ತು ಇದ್ದಂತೆ ನಾಳೆ ಇರಲ್ಲ. ಸಮಯ ಕಳೆದಂತೆ ಕಷ್ಟಗಳು ದೂರವಾಗಿ ಒಳ್ಳೆಯ ದಿನ ಬರುತ್ತದೆ ಎನ್ನುವ ನಂಬಿಕೆಯಿರಲಿ.
ಹೆಚ್ಚು ತಲೆಕೆಡಿಸಿಕೊಳ್ಳಬೇಡಿ : ಬೇಡದ ಆಲೋಚನೆಗಳು ಇಂದಿನ ಖುಷಿಯನ್ನು ಕಿತ್ತುಕೊಳ್ಳುತ್ತವೆ. ಹೀಗಾಗಿ ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇಂದಿನ ದಿನವನ್ನು ಖುಷಿಯಿಂದ ಕಳೆಯಿರಿ.
ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಿ : ಯಾವುದೇ ಸಂಕಷ್ಟ, ಸಮಸ್ಯೆ, ಸವಾಲುಗಳೇ ಇರಲಿ, ಬುದ್ಧಿವಂತಿಕೆಯಿಂದಲೇ ಪರಿಹರಿಸಿಕೊಳ್ಳುವುದು ಗೊತ್ತಿರಬೇಕು. ಸವಾಲುಗಳನ್ನು ಧೈರ್ಯವಾಗಿ ಸ್ವೀಕರಿಸಿದರೆ ಜೀವನದಲ್ಲಿ ನೆಮ್ಮದಿಯಿಂದ ಖುಷಿಯಾಗಿರಲು ಸಾಧ್ಯ.
ಪರಿಪೂರ್ಣತೆ ಹಿಂದೆ ಓಡಬೇಡಿ : ಜೀವನದಲ್ಲಿ ಯಾರು ಕೂಡ ಪರಿಪೂರ್ಣರಾಗಿಲ್ಲ. ಪರಿಪೂರ್ಣವಾಗಿರುವ ಒಳ್ಳೆಯ ವಿಷಯವಾಗಿದ್ದರೂ ಅದರ ಹಿಂದೆ ಹೋಗುವ ವ್ಯಕ್ತಿಯೂ ಖುಷಿಯಾಗಿರಲ್ಲ.. ಇದು ಒತ್ತಡ ಹಾಗೂ ಆತಂಕವನ್ನು ಉಂಟು ಮಾಡುತ್ತದೆ. ಹೀಗಾಗಿ ಮಾಡುವ ಕೆಲಸವು ಪರ್ಫೆಕ್ಟ್ ಆಗಿರಬೇಕೆನ್ನುವ ಮನಸ್ಥಿತಿ ಬೇಡ. ಏನಾದರೂ ತಪ್ಪಾದರೆ ಮತ್ತೆ ಆ ತಪ್ಪು ಮರುಕಳಿಸದಂತೆ ನೋಡಿ ಬದಲಾವಣೆ ಮಾಡಿಕೊಳ್ಳಿ.
ನಿಯಮಿತ ವ್ಯಾಯಾಮ : ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಿ ಆರೋಗ್ಯದೊಂದಿಗೆ ಚೈತನ್ಯವನ್ನು ಹೆಚ್ಚಿಸುತ್ತದೆ. ಇದರಿಂದ ನೆಮ್ಮದಿ ಹಾಗೂ ಸಂತೋಷವಾಗಿರಲು ಸಾಧ್ಯವಾಗುತ್ತದೆ.
ನೀವು ನೀವಾಗಿರಿ : ಬೇರೆಯವರಿಗಾಗಿ ಬದುಕುವುದಕ್ಕಿಂತ ನಮಗಾಗಿ ನಾವು ಬದುಕುವುದರಲ್ಲಿ ಒಂದು ಅರ್ಥವಿದೆ. ಬೇರೆಯವರ ಮೇಲೆ ಅತಿಯಾದ ನಿರೀಕ್ಷೆಯಿಟ್ಟುಕೊಳ್ಳುವುದಕ್ಕಿಂತ ನಮ್ಮಲ್ಲೇ ನಾವು ಸಂತೋಷ ಕಾಣಬೇಕು. ನಿಮ್ಮ ಮನಸ್ಸಿಗೆ ಖುಷಿಯಾಗುವಂತೆ ಪ್ರಾಮಾಣಿಕವಾಗಿ ಬದುಕಿ.
ಸ್ವಯಂ ಕಾಳಜಿ ವಹಿಸಿ : ತಮ್ಮ ಬಗ್ಗೆ ತಾವೇ ಕಾಳಜಿ ವಹಿಸುವುದು ಅತ್ಯಗತ್ಯ ಎಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡ ತಮ್ಮನ್ನು ತಾವು ಒತ್ತಡಕ್ಕೆ ಒಳಪಡಿಸಬೇಡಿ. ನಿಯಮಿತ ನಿದ್ದೆ, ಆಹಾರ ಸೇವನೆ, ಮನಸ್ಸು ಶಾಂತವಾಗಿರಲಿ.
ಸಹಾನುಭೂತಿ ಹಾಗೂ ದಯಾಗುಣವಿರಲಿ : ಬೇರೆಯವರಿಗೆ ಮಾಡುವ ಸಹಾಯ ಮನೋಭಾವ ಹಾಗೂ ದಯಾಗುಣವೂ ಖುಷಿ ನೀಡುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣದೊಂದಿಗೆ ನಮ್ಮ ತಪ್ಪುಗಳನ್ನು ಹಾಗೂ ಅಪೂರ್ಣತೆಗಳನ್ನು ಒಪ್ಪಿಕೊಳ್ಳುತ್ತೇವೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವು ಸಿಗುತ್ತದೆ.
PublicNext
07/01/2025 01:09 pm