ಮುಲ್ಕಿ: ಮಹಿಳೆಯ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ಬಳಿ ನಡೆದಿದೆ.
ಅಪಘಾತದಿಂದ ಗಂಭೀರ ಗಾಯಗೊಂಡ ಪಾದಚಾರಿ ಕೆರೆಕಾಡು ನಿವಾಸಿ ಗಣೇಶ್ ಆಚಾರ್ಯ ( 61) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಿತಿ ಶ್ರೀಪ್ರಸಾದ್ ಎಂಬುವರು ಕಾರು ಚಾಲನೆ ಮಾಡುತ್ತಿದ್ದರು.
ಗಣೇಶ್ ಆಚಾರ್ಯ ಅವರು ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ನೇಮೋತ್ಸವದಿಂದ ವಾಪಸ್ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಪುನರೂರು ವಿಶ್ವನಾಥ ದೇವಸ್ಥಾನದ ದ್ವಾರದ ಬಳಿ ಅವರ ಹಿಂದಿನಿಂದ ಎಸ್ ಕೋಡಿ ಕಡೆಯಿಂದ ಬಂದ ಟಿಎನ್ 07 ಸಿ ಎಚ್ 8312 ನಂಬರ್‌ನ ಕಾರು ಡಿಕ್ಕಿ ಹೊಡೆದಿದೆ.
ಅದಿತಿ ಶ್ರೀಪ್ರಸಾದ್ ಅವರ ನಿರ್ಲಕ್ಷ್ಯತನದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಣೇಶ್ ಆಚಾರ್ಯ ಗಂಭೀರ ಗಾಯಗೊಂಡು ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ವಿದ್ಯುತ್ ಕಂಬ ಕೂಡಾ ಮುರಿದು ಬಿದ್ದಿದ್ದು ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
06/01/2025 09:50 pm