ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 5 ಗಂಟೆ ಕಾದರೂ ದರ್ಶನ ಸಿಗಲಿಲ್ಲ - ಘಾಟಿ ಸುಬ್ರಹ್ಮಣ್ಯ ಆಡಳಿತ ಮಂಡಳಿ ವಿರುದ್ಧ ಭಕ್ತರ ಆಕ್ರೋಶ

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ಬ್ರಹ್ಮರಥೋತ್ಸವ ಹಿನ್ನಲೆ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಸತತ 5 ಗಂಟೆ ಸರದಿ ಸಾಲಿನಲ್ಲಿ ಕಾದರೂ ದೇವರ ದರ್ಶನ ಸಿಗದ ಹಿನ್ನಲೆ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಭಕ್ತರು ರೊಚ್ಚಿಗೆದ್ದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ನಡೆಯುತ್ತಿದೆ. ಘಾಟಿ ಕ್ಷೇತ್ರಕ್ಕೆ ಮುಂಜಾನೆ 3 ಗಂಟೆಯಿಂದ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ನಿರಂತರ 5 ಗಂಟೆಗೂ ಹೆಚ್ಚು ಕಾಲ ಸರದಿಯಲ್ಲಿ ನಿಂತರರೂ ದೇವರ ದರ್ಶನ ಭಕ್ತರಿಗೆ ಸಿಕ್ಕಿಲ್ಲ.

ಬೆಳಗ್ಗೆ 6ಗಂಟೆಯಿಂದ ಸರದಿಯಲ್ಲಿ ನಿಂತಿರುವ ಭಕ್ತರು, ಬೆಳಗ್ಗೆ 6 ರಿಂದ 11.30 ಆದರೂ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ವರ್ತನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೇವಲ ಹಣ ಸಂಗ್ರಹಕ್ಕೆ ಮಾತ್ರ ಆಡಳಿತ ಮಂಡಳಿ ಸೀಮಿತವಾಗಿದೆ. ಭಕ್ತರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ನೂರು ರೂಪಾಯಿ ಕೊಟ್ಟು ದರ್ಶನದ ಟಿಕೆಟ್ ಕೊಟ್ಟರೂ ದರ್ಶನ ಇಲ್ಲ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತವರಿಗೆ ಕುಡಿಯಲು ನೀರು, ಸಕ್ಕರೆ ರೋಗಿಗಳು ಊಟ ಆಹಾರವಿಲ್ಲದೆ ಕಾಯುತ್ತಿದ್ದಾರೆ. ಚಿಕ್ಕಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ಪ್ರತಿ ವರ್ಷ ನಾವು ಜಾತ್ರೆಗೆ ಬರುತ್ತಿದ್ದೆವು. ಒಂದು ಗಂಟೆಯಲ್ಲಿ ಲಕ್ಷಾಂತರ ಭಕ್ತರು ದರ್ಶನ ಮಾಡುತ್ತಿದ್ದರು. ಈ ವರ್ಷ 5 ತಾಸು ಕಳೆದರೂ ದರ್ಶನ ಸಿಕ್ಕಿಲ್ಲ ಎಂದು ಭಕ್ತರಾದ ಬೈರಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

05/01/2025 03:56 pm

Cinque Terre

34.87 K

Cinque Terre

0

ಸಂಬಂಧಿತ ಸುದ್ದಿ