ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ : ಮೂವರ ಮೇಲೆ ಹೆಜ್ಜೇನು ದಾಳಿ- ಹೆರ್ಗದ ಉದಯ ಶೇರಿಗಾರ್ ಸ್ಥಿತಿ ಗಂಭೀರ !

ಮಣಿಪಾಲ : ಹೆರ್ಗ ಗ್ರಾಮದ ಮೂವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ಓರ್ವರ ಸ್ಥಿತಿ ಗಂಭೀರವಾಗಿದೆ.ಸದ್ಯ ಉದಯ ಶೇರಿಗಾರ್ ಎಂಬವರು ಮಣಿಪಾಲದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಗ್ಯಾಬ್ರಿಯಲ್ ಮತ್ತು ಮತ್ತು ಸದಾಶಿವ ಎಂಬವರಿಗೂ ಹೆಜ್ಜೇನು ದಾಳಿಯಿಂದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಸ್ಥಳೀಯವಾಗಿ ನಡೆಯುವ ಅಯ್ಯಪ್ಪ ಆರಾಧನಾ ಶಿಬಿರಕ್ಕೆ ತೆರಳುತ್ತಿದ್ದರು.ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ.ಈ ಸಂದರ್ಭ ಉದಯ ಅವರು ತಪ್ಪಿಸಿಕೊಂಡು ಓಡಿಹೋಗಿದ್ದು ಗುಡ್ಡದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಇದನ್ನು ಗಮನಿಸಿದ ಸ್ಥಳೀಯರು ಮತ್ತು ಕುಟುಂಬಸ್ಥರ ಸಹಾಯದಿಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.ಉದಯ ಅವರ ಸ್ಥಿತಿ ಗಂಭೀರವಾಗಿದ್ದು ,ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Edited By : Nirmala Aralikatti
PublicNext

PublicNext

04/01/2025 02:22 pm

Cinque Terre

29.66 K

Cinque Terre

0

ಸಂಬಂಧಿತ ಸುದ್ದಿ