ಗಂಗೊಳ್ಳಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ನಾರಾಯಣ (58) ಎಂಬವರು ಮೀನುಗಾರಿಕೆ ಮಾಡುತ್ತಿದ್ದಾಗ ಬೋಟ್ ನಿಂದ ಬಿದ್ದು ಸಮುದ್ರಪಾಲಾದ ಘಟನೆ ಸಂಭವಿಸಿದೆ.
ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಸರ್ವಮಂಗಲೇ ಎಂಬ ಬೋಟ್‌ನಲ್ಲಿ ಗಂಗೊಳ್ಳಿ ಬಂದರ್‌ನಿಂದ ಮೀನುಗಾರಿಕೆಗೆಂದು ಹೋಗಿದ್ದರು. ಅರಬ್ಬಿ ಸಮುದ್ರದಲ್ಲಿ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕಾಣೆಯಾಗಿದ್ದಾರೆ. ಈ ಬಗ್ಗೆ ಅವರ ಸಹೋದರ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/01/2025 11:00 am